Belagavi

ಬೆಳಗಾವಿಯಲ್ಲಿ ಕೋವಿಡ್ ಸೇನಾನಿ ಪ್ರಯೋಗಾಲಯ ತಂತ್ರಜ್ಞರಿಗೆ ಸನ್ಮಾನ

Share

ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ಪ್ರಯೋಗಾಲಯ ತಂತ್ರಜ್ಞರನ್ನು ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಮಾಜಿ ಮಹಾಪೌರ ವಿಜಯ ಮೋರೆ ನೇತೃತ್ವದಲ್ಲಿ ಸನ್ಮಾನಿಸಿ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಲಾಯಿತು.

: ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತವಾಗಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ಪ್ರಯೋಗಾಲಯ ತಂತ್ರಜ್ಞರನ್ನು ಸನ್ಮಾನಿಸಿ ಪ್ರಶಂಸೆ ವ್ಯಕ್ತಪಡಿಸಲಾಯಿತು.

ಈ ವೇಳೆ ಮಾಜಿ ಮಹಾಪೌರ ವಿಜಯ ಮೋರೆ ಮಾತನಾಡಿ, ಕೋವಿಡ್ ಸೋಂಕು ವ್ಯಾಪಕವಾಗಿದ್ದ ವೇಳೆ ಎಡೆಬಿಡದೇ ಕಾರ್ಯ ಮಾಡಿದ ಪ್ರಯೋಗಾಲಯ ತಂತ್ರಜ್ಞರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಇದೊಂದು ಗೌರವ ಸೂಚಿಸುವ ಕೆಲಸ. ಇನ್ನು ಕೊರೋನಾ ವ್ಯಾಪಕವಾಗಿದ್ದ ವೇಳೆ ಮೃತಪಟ್ಟವರ ಶವ ಸಂಸ್ಕಾರವನ್ನೂ ನಮ್ಮ ಸಂಘಟನೆಯಿಂದ ಮಾಡಿದ್ದೇವೆ. ಸಮಾಜಮುಖಿ ಕೆಲಸದಲ್ಲಿ ಸಂತೋಷ ಇರುತ್ತದೆ. ಲೇಕವ್ಯೂ ಆಸ್ಪತ್ರೆಯ ಡಾ.ಶಶಿಕಾಂತ ಕುಲಗೋಡ ಸೇರಿದಂತೆ ಹಲವಾರು ಜನರು ಈ ಕಾರ್ಯಕ್ಕೆ ಬಹಳಷ್ಟು ನೆರವಾಗಿದ್ದಾರೆ ಎಂದರು.

ಈ ವೇಳೆ ಲೇಕ್‍ವ್ಯೂ ಆಸ್ಪತ್ರೆಯ ಡಾ.ಶಶಿಕಾಂತ ಕುಲಗೋಡ ಮಾತನಾಡಿ, ಕೋವಿಡ್ ಹಲವು ಹೊಸ ಅನುಭವಗಳನ್ನು ನೀಡಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಸಮನ್ವಯದಿಂದ ಕೆಲಸ ಮಾಡುವುದನ್ನು ಸಂದರ್ಭ ಕಲಿಸಿತು. ಪ್ರಯೋಗಾಲಯ ತಂತ್ರಜ್ಞರ ಸೇವೆ ಅಮೂಲ್ಯವಾಗಿತ್ತು. ಕೋವಿಡ್ ಇನ್ನೂ ಸಂಪೂರ್ಣ ತೊಲಗಿಲ್ಲ. ಎಚ್ಚರಿಕೆಯಿಂದ ಇರಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಅಧ್ಯಕ್ಷತೆ ವಹಿಸಿದ್ದರು. ನಾಗೇಶ ಚೌಗಲೆ, ಅತೀನ್ ಮೋರೆ ಸಂತೋಷ ಮಮದಾಪುರ, ಸಂತೋಷ ಧರೇಕರ ಪಾಲ್ಗೊಂಡಿದ್ದರು.
ಪ್ರತಿಮಾ ಇಕ್ಕಡಿ ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕವಿತಾ ಕುಂಬಾರ ಸ್ವಾಗತಿಸಿದರು. ಸಿ.ಜಿ.ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಮಹಾಪೌರ ವಿಜಯ ಮೋರೆ ವಂದಿಸಿದರು.

Tags:

error: Content is protected !!