Uncategorized

ಬೆಳಗಾವಿಯಲ್ಲಿ ಎಂಇಎಸ್-ಶಿವಸೇನೆ ವತಿಯಿಂದ ಹುತಾತ್ಮಾ ದಿನಾಚರಣೆ

Share

 

 

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಕೋವಿಡ್ ಹಿನ್ನೆಲೆ ಈ ಬಾರಿ ಸರಳವಾಗಿ ಮೆರವಣಿಗೆ ಇಲ್ಲದೇ ಹುತಾತ್ಮಾ ದಿನವನ್ನ ಆಯೋಜಿಸಲಾಗಿತ್ತು.
ಗಡಿ ಹೋರಾಟದಲ್ಲಿ ಮಡಿದವರಿಗೆ ಗೌರವ ಸೂಚಿಸಲೂ ಗಡಿ ಭಾಗದಲ್ಲಿ ಪ್ರತಿ ಜನವರಿ ೧೭ ರಂದು ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಹುತಾತ್ಮ ದಿನವನ್ನ ಆಯೋಜಿಸಲಾಗುತ್ತದೆ. ಅದರಂತೆ ಇಂದು ಕೂಡ ಎಂಇಎಸ್ ಹುತಾತ್ಮಾ ದಿನವನ್ನ ಆಯೋಜಿಸಿತ್ತು. ಆದರೇ ಈ ಬಾರಿ ಮೆರವಣಿಗೆಯಿಲ್ಲದೆಯೇ ಈ ಹುತಾತ್ಮ ದಿನ ಸಂಪನ್ನಗೊಂಡಿತು. ಮೊದಲಿಗೆ ಕಾವೇರಿ ಕೋಲ್ಡ್ರಿಂಕ್ಸ್ ಹತ್ತಿರದ ಹುತಾತ್ಮ ಚೌಕಗೆ ತಲುಪಿದ ಎಂಇಎಸ್‌ನ ನಾಯಕರು, ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ದೀಪಕ ದಳವಿ ಅವರ ನೇತೃತ್ವದಲ್ಲಿ ಹುತಾತ್ಮಾ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಈ ವೇಳೆ ಕಿರಣ ಠಾಕೂರ್, ಪ್ರಕಾಶ ಶಿರೋಳಕರ ಇನ್ನುಳಿದವರು ಉಪಸ್ಥಿತರಿದ್ಧರು. ಅದರಂತೆ ಶಿವಸೇನಾ ಪಕ್ಷದ ವತಿಯಿಂದಲೂ ಗೌರವ ಸೂಚಿಸಲಾಯಿತು. ಪ್ರಕಾಶ ಶಿರೋಳಕರ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

 

ಈ ವೇಳೆ ಮಾತನಾಡಿದ ಕಿರಣ ಠಾಕೂರ್, ಶೀಘ್ರದಲ್ಲೇ ಬಹುದಿನಗಳಿಂದ ಬಗೆಹರಿಯದ ಗಡಿವಿವಾದವನ್ನ ಬಗೆಹರಿಸಬೇಕು. ಮಹಾರಾಷ್ಟ್ರ ಸರ್ಕಾರ ಕೂಡ ಬೆನ್ನಿಗೆ ನಿಲ್ಲಬೇಕು. ಇನ್ನು ಎಷ್ಟು ದಿನ ಗಡಿಯಲ್ಲಿ ಮರಾಠಿಗರು ಹೋರಾಡಬೇಕು? ನಾವೂ ನ್ಯಾಯವನ್ನ ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ ಎಂದರು.
ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ದೀಪಕ ದಳವಿ ಅವರು, ಗೃಹ ಸಚಿವ ಅಮೀತ್ ಶಾಹ್ ಸಮಾರಂಭಕ್ಕೆ ಅನುಮತಿ ನೀಡಿ, ಎಂಇಎಸ್‌ನ ರ‍್ಯಾಲಿಗೆ ಅನುಮತಿ ನೀಡುತ್ತಿಲ್ಲ. ಶಾಹ್ ಕಾರ್ಯಕ್ರಮಕ್ಕೆ ಅಡ್ಡಿಯಾಗದ ಕೊರೋನಾ ಎಂಇಎಸ್‌ನ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತದಾ ಎಂದು ಪ್ರಶ್ನಿಸಿದರು. ಇನ್ನು ಮಹಾಪಾಲಿಕೆ ಮುಂದೆ ಹಾರಿಸಿದ ಕನ್ನಡ ಧ್ವಜವನ್ನ ತೆರವುಗೊಳಿಸಬೇಕೆಂದು ಆಗ್ರಹಿಸಿ, ಜನವರಿ ೨೧ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಗುವುದೆಂದರು.
ನಂತರ ಅನುಸೂರಕರ ಗಲ್ಲಿ, ರಾಮಲಿಂಗಖಿಂಡಗಲ್ಲಿ, ಕಿರ್ಲೋಸ್ಕರ ರೋಡ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಕ್ಷಿಪ್ತ ರ‍್ಯಾಲಿ ನಡೆಸಲಾಯಿತು.

 

 

 

 

 

 

Tags:

error: Content is protected !!