Belagavi

ಬೆಳಗಾವಿಗೆ ಬೈ ಬೈ ಹೇಳಿ..ದೆಹಲಿಗೆ ಸ್ಪೇಶಲ್ ಫ್ಲೈಟ್ ಹತ್ತಿದ ಅಮಿತ್ ಶಾ

Share

ಎರಡು ದಿನಗಳ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ಮುಗಿದಿದ್ದು. ವಿಶೇಷ ವಿಮಾನದ ಮೂಲಕ ಬೆಳಗಾವಿಯಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಹೌದು ಎರಡು ದಿನಗಳ ಮಟ್ಟಿಗೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅಮಿತ್ ಶಾ ನಿನ್ನೆ ಭದ್ರಾವತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂದು ಬೆಳಿಗ್ಗೆ ಬಾಗಕೋಟೆ ಕಾರ್ಯಕ್ರಮ ಮುಗಿಸಿ ಬಳಿಕ ಮಧ್ಯಾಹ್ನ ಬೆಳಗಾವಿಯ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಿದ್ದರು. ಹೀಗಾಗಿ ತಮ್ಮ ಎರಡು ದಿನಗಳ ಪ್ರವಾಸ ಮುಗಿದ ಹಿನ್ನೆಲೆ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು. ಈ ವೇಳೆ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಅಮಿತ್ ಶಾರನ್ನು ಬಿಳ್ಕೊಟ್ಟರು.

 

Tags:

error: Content is protected !!