Belagavi

ಬೆಳಗಾವಿಗೆ ಬಂತು ಕೋವಿಶೀಲ್ಡ..ಆರತಿ ಮಾಡಿ ಬರಮಾಡಿಕೊಂಡ್ರು ಮಹಿಳಾ ಸಿಬ್ಬಂದಿ

Share

ಅಂತೂ ಇಂತೂ ಬೆಳಗಾವಿಗೆ ಕೋವಿಶೀಲ್ಡ್ ಲಸಿಕೆ ಇಂದು ಬೆಳಗಿನ ಜಾವವೇ ಪುಣೆಯಿಂದ ಬಂದಿದೆ. ಈ ವೇಳೆ ವ್ಯಾಕ್ಸಿನ್ ಡಿಪೆÇೀದಲ್ಲಿ ಕೋವಿಶೀಲ್ಡ್ ರೆಫ್ರಿಜರೇಟರ್ ವಾಹನಕ್ಕೆ ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿ ಆರತಿ ಬೆಳಗಿ ಬರಮಾಡಿಕೊಂಡರು. ಆದ್ರೆ ಲಸಿಕೆ ವಾಹನ ಬಂದು ಒಂದು ಗಂಟೆ ನಂತರ ಎಲ್ಲಾ ಅಧಿಕಾರಿಗಳು ಬಂದಿದ್ದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ.

ಹೌದು ದೇಶಾಧ್ಯಂತ ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರ ಸರಬರಾಜು ಮಾಡುತ್ತಿದೆ. ಪುಣೆಯ ಸೆರಮ್ ಇನ್ಸಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯಿಂದ 1.1 ಕೋಟಿ ಕೋವಿಶೀಲ್ಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿ ಮಾಡಿದೆ. ಅದರಲ್ಲಿ 1.47 ಲಕ್ಷ ಡೋಸ್ ಲಸಿಕೆಯನ್ನು ಬೆಳಗಾವಿಗೆ ಬುಧವಾರ ಬೆಳಿಗ್ಗೆ ರೆಫ್ರಿಜರೇಟರ್ ವಾಹನದಲ್ಲಿ ಬಂತು. ಮಹಾರಾಷ್ಟ್ರ ಗಡಿ ಪ್ರದೇಶದಿಂದ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್ ಗೇಟ್ ಮೂಲಕ ಎಂಹೆಚ್ 04 ಜೆಕೆ 1669 ಸಂಖ್ಯೆಯ ವಾಹನದಲ್ಲಿ 3.10ಕ್ಕೆ ಕೋವಿಶೀಲ್ಡ್ ಲಸಿಕೆ ಗಡಿ ಪ್ರವೇಶ ಮಾಡಿತ್ತು. ಮಹಾರಾಷ್ಟ್ರದ ಗಡಿವರೆಗೂ ಲಸಿಕಾ ವಾಹನಕ್ಕೆ ಮಹಾರಾಷ್ಟ್ರ ಪೆÇಲೀಸರು ಭದ್ರತೆ ಒದಗಿಸಿದ್ದರು. ಬಳಿಕ ಕರ್ನಾಟಕ ಪೆÇಲೀಸರಿಂದ ಲಸಿಕೆ ಸಾಗಣೆ ವಾಹನಕ್ಕೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ಟಿಳಕವಾಡಿ ನಗರದ ವ್ಯಾಕ್ಸಿನ್ ಡಿಪೆÇೀದಲ್ಲಿರುವ ಡಿಹೆಚ್‍ಒ ಕಚೇರಿಗೆ ಕೋವಿಶೀಲ್ಡ್ ಲಸಿಕೆ ಬೆಳಗಿನ ಜಾವ ಸರಿಯಾಗಿ 5 ಗಂಟೆಗೆ ಆಗಮಿಸಿತ್ತು. ಆದ್ರೆ ಕೊರೊನಾ ಲಸಿಕೆಗಳನ್ನು ಸ್ವಾಗತ ಮಾಡಿಕೊಳ್ಳಬೇಕಿದ್ದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನು ಕೋವಿಶೀಲ್ಡ್ ಲಸಿಕೆ ವಾಹನ ಆಗಮಿಸಿದ ಒಂದು ಗಂಟೆ ಬಳಿಕ ಮಹಾಂತೇಶ ಹಿರೇಮಠ ಆಗಮಿಸಿದರು. ಇದಾದ ಬಳಿಕ ಡಿಹೆಚ್ಒ ಡಾ.ಎಸ್.ವಿ.ಮುನ್ಯಾಳ್ ಆಗಮಿಸಿದ್ದಾರೆ. ಆದ್ರೆ, ಕಚೇರಿಗೆ ವಾಕ್ ಇನ್ ಕೂಲರ್ ನಿರ್ವಹಣಾ ಸಿಬ್ಬಂದಿ ಆಗಮಿಸದ ಹಿನ್ನೆಲೆ ಮತ್ತೆ ಒಂದು ಗಂಟೆಗೂ ಹೆಚ್ಚು ಕಾಲ ಕೊರೊನಾ ಲಸಿಕೆ ಹೊತ್ತು ನಿಂತಿರುವ ವಾಹನ ಆನ್ ಮಾಡಿಯೇ ಹೊರಗೆ ನಿಲ್ಲಿಸಲಾಗಿತ್ತು. ಇಲಾಖಾ ಸಿಬ್ಬಂದಿಗಾಗಿ ಡಾ.ಈಶ್ವರ ಗಡಾದ್ ಹಾಗೂ ಜಿಲ್ಲಾಧಿಕಾರಿಗಳು ಕಾದು ಕುಳಿತುಕೊಳ್ಳುವ ಪ್ರಸಂಗವೂ ನಡೆಯಿತು. ಕಡೆಗೆ ಸಿಬ್ಬಂದಿ ಆಗಮಿಸಿದ ನಂತರ ರೆಫ್ರಿಜರೇಟರ್ ವಾಹನಕ್ಕೆ ಮಹಿಳಾ ಸಿಬ್ಬಂದಿ ಆರತಿ ಮಾಡಿ, ಪೂಜೆ ಮಾಡಿ ಬರಮಾಡಿಕೊಂಡರು. ನಂತರ ವಾಹನಕ್ಕೆ ಸ್ಯಾನಿಟೈಸ್ ಮಾಡಿ ಕೋವಿಶೀಲ್ಡ ಲಸಿಕೆ ಇರುವ ಬಾಕ್ಸಗಳನ್ನು ವಾಕ್ ಇನ್ ಕೂಲರ್ ರೂಮಗೆ ರವಾನೆ ಮಾಡಲಾಯಿತು.

ಇನ್ನು ಈ ಸಂಬಂಧ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ ಮಹಾರಾಷ್ಟ್ರದ ಪುಣೆಯಿಂದ 13 ಬಾಕ್ಸ್ ಗಳಲ್ಲಿ 1.47 ಲಕ್ಷ ಕೋವಿಶೀಲ್ಡ್ ಲಸಿಕೆಗಳು ಆಗಮಿಸಿವೆ. ಅದನ್ನು ಎಂಟು ಜಿಲ್ಲೆಗಳಿಗೆ ಶಿಫ್ಟ್ ಮಾಡಲಾಗುವುದು. ಜಿಲ್ಲೆಯ ಮೊದಲ ಹಂತದಲ್ಲಿ 12 ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುತ್ತಿದ್ದು, ಒಟ್ಟು 180 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ.16 ರಿಂದ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಇನ್ನು ಬೆಳಗಾವಿಗೆ ಅμÉ್ಟೀ ಪ್ರತ್ಯೇಕವಾಗಿ 37 ಸಾವಿರ ಲಸಿಕೆಗಳು ಬಂದಿವೆ. ನಾವು ಕೂಡ 37 ಸಾವಿರ ಲಸಿಕೆ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಿದ್ದೇವು. ಅದರಂತೆ 37 ಸಾವಿರ ಲಸಿಕೆಗಳು ಕೊಟ್ಟಿದ್ದಾರೆ. ಈ ಮೊದಲು 28 ಸಾವಿರ ಆರೋಗ್ಯ ಇಲಾಖೆ ಸಿಬ್ಬಂದಿ ನೋಂದಾವಣೆ ಮಾಡಿಕೊಳ್ಳಲಾಗಿತ್ತು. ಬಳಿಕ 37 ಸಾವಿರ ಜನರು ನೋಂದಾವಣೆ ಮಾಡಿಕೊಂಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ಉಳಿದ ಏಳು ಜಿಲ್ಲೆಗಳಿಗೆ ಇಲ್ಲಿಂದಲೇ ಕಳುಹಿಸಲಾಗುತ್ತದೆ ಎಂದರು.

ಒಟ್ಟಾರೆ ಬೆಳಗಾವಿಗೆ ಕೋವಿಶೀಲ್ಡ್ ಆಗಮಿಸಿದ್ದು. ಜ.16ರಿಂದ ಜಿಲ್ಲೆಯ 37 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯರ್ತರಿಗೆ ಲಸಿಕೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

Tags:

error: Content is protected !!