ಬೆಳಗಾವಿ ನಗರದ ಎಲ್ಲ ಪ್ರದೇಶಗಳಲ್ಲಿ ಜನವರಿ 10 ಮತ್ತು 11ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಳಿಸಿದ್ದಾರೆ.
ವಿದ್ಯುತ್ ಕೇಂದ್ರದಲ್ಲಿ ಜನವರಿ 10ರಂದು ತುರ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಹಿಂಡಲಗಾ ಪಂಪ್ ಹೌಸ್‍ನಲ್ಲಿ ನೀರು ಸಂಗ್ರಹಕ್ಕೆ ತೊಂದರೆಯಾಗಲಿದೆ. ಇದರಿಂದ ದಿನದ 24 ಗಂಟೆ ಪ್ರಾತ್ಯಕ್ಷಿಕೆ ವಲಯ ಸೇರಿ ಬೆಳಗಾವಿ ನಗರದ ಎಲ್ಲ ಪ್ರದೇಶಗಳಿಗೂ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ. ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಳಿಸಿದ್ದಾರೆ.