ಬೆಳಗಾವಿಯಿಂದ ಮಾಳುಂಗೆಯ ನಲವಡೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರಕ್ ಬೆನಕನಹಳ್ಳಿ ಬಳಿಯ ಕೆಂಬಾಳಿ ನಾಲಾ ಬಳಿ ಬುಧವಾರ ರಾತ್ರಿ ಉರುಳಿಬಿದ್ದಿದೆ. ಈ ಅಪಘಾತದಲ್ಲಿ ಟ್ರಕ್ ಚಾಲಕ ತೀವ್ರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿಯಿಂದ ಮಾಳುಂಗೆಯ ನಲವಡೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರಕ್ ಬೆನಕನಹಳ್ಳಿ ಬಳಿಯ ಕೆಂಬಾಳಿ ನಾಲಾ ಬಳಿಯ ತಿರುವಿನಲ್ಲಿ ಹೊರಳುವಾಗ ಪಲ್ಟಿಯಾಗಿದೆ. ರಾತ್ರಿ 11.15ರ ಸುಮಾರಿಗೆ ನಿರ್ಜನ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡಿದ್ದ ಟ್ರಕ್ ಚಾಲಕನನ್ನು ಅಪಘಾತದ ಸುದ್ದಿ ತಿಳಿದವರು ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಗಾಯಗೊಂಡ ಟ್ರಕ್ ಚಾಲಕನನ್ನು ಮಹಾರಾಷ್ಟ್ರದ ಬೀಡ ಜಿಲ್ಲೆಯ ಉಮ್ರಿ ಗ್ರಾಮದ 52 ವರ್ಷದ ಬಾಳು ಶಿಪಿಟ್ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಕಬ್ಬು ಕಟಾವು ಕಾರ್ಮಿಕರು ಟ್ರಕ್ನಿಂದ ಕಬ್ಬನ್ನು ಬೇರೊಂದು ವಾಹನಕ್ಕೆ ವರ್ಗಾಯಿಸಿ ಕಾರ್ಖಾನೆಗೆ ಸಾಗಿಸಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಮಾಹಿತಿ ಲಭ್ಯವಾಗಿಲ್ಲ.