Uncategorized

ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ.. ಪಾಲಿಕೆ ಆವರಣದಲ್ಲಿಯೇ ವ್ಯಾಪಾರ ಆರಂಭಮಾಡಲಾಗುವುದು : ಗುರುನಾಥ ಉಳ್ಳಿಕಾಶಿ

Share

ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯವರು ಹು-ಧಾದ ಬೀದಿ ಬದಿ ವ್ಯಾಪಾರಸ್ಥರನ್ನು ಅಕ್ರಮವಾಗಿ ಬಲವಂತದ ಮೂಲಕ‌ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಇದು ಕೊರೋನಾ ನಂತರದ ಮಾರಕ ವಾತಾವರಣದಲ್ಲಿ ನಡೆಸುತ್ತಿರುವ ದೌರ್ಬಲ್ಯವಾಗಿದೆ. ಕೂಡಲೇ ತೆರವು ಕಾರ್ಯಾಚರಣೆ ಕೈಬಿಟ್ಟು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಯಮಾನುಸಾರ ಬೀದಿಬದಿಯ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿನಗರದಲ್ಲಿ ಸುಮಾರು 20,000 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ತರಿದ್ದು, ಈ ವ್ಯಾಪಾರಸ್ಥರ ಹಿತಕ್ಕಾಗಿ ಬೀದಿ-ಬದಿ ವ್ಯಾಪಾರಸ್ಥರಿಂದಲೇ ಸರ್ಕಾರ ಘನ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಚುನಾವಣೆಯನ್ನು ಸಹ ನಡೆಸಿದ್ದು, ಈವರೆಗೆ ಪಾಲಿಕೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹಿತಕ್ಕಾಗಿ ಯಾವುದೇ ಒಂದು ಸಭೆ ನಡೆಸದೇ ಇರುವುದು ವಿಷಾದಕರ.
ಇಷ್ಟೆಲ್ಲಾ ವಿಷಯಗಳಿದ್ದರೂ ಸಹ ಹುಬ್ಬಳ್ಳಿಯ ಬ್ರಾಡ್ ವೇ, ದುರ್ಗದ ಬಯಲು, ಶಾ ಬಜಾರ ರಸ್ತೆ, ಬೆಳಗಾಂಗಲ್ಲಿ, ಎಮ್.ಜಿ.ಮಾರುಕಟ್ಟೆ, ಕೊಪ್ಪಿಕರ ರಸ್ತೆ, ಧಾರವಾಡದ ಸೂಪರ್ ಮಾರ್ಕೆಟ್, ಕೆಸಿಡಿ ವೃತ್ತ, ಕಲಾಭವನ, ನೆಹರು ಮಾರ್ಕೆಟ್, ಸುಭಾಷ್ ರಸ್ತೆಗಳಲ್ಲಿನ ಬೀದಿಬದಿಯ ವ್ಯಾಪಾರಸ್ಥರ ಮೇಲೆ ದೌರ್ಜನ್ಯದ ಮೂಲಕ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತದ ಹೆಸರಿನಲ್ಲಿ ಪಾಲಿಕೆ ಅಧಿಕಾರಿಗಳು ಪೋಲಿಸ್ ಇಲಾಖೆಯ ನೇತೃತ್ವದಲ್ಲಿ ಕೈಗೊಂಡು ಮಾರಾಟದ ವಸ್ತುಗಳನ್ನು ಜಪ್ತಿಮಾಡಿ ದಂಡವನ್ನು ಕಟ್ಟಿಸಿಕೊಳ್ಳಲು ಮುಂದಾಗಿರುದನ್ನು ತೀವ್ರವಾಗಿ ಖಂಡಿಸಲಾಗುವುದು.‌ ಅಲ್ಲದೇ ಇಲ್ಲಸಲ್ಲದ ನೆಪವೊಡಿ ಕೆಪಿ ಕಾಯಿದೆ ಅಡಿಯಲ್ಲಿ ದಂಡ ಹಾಕುತ್ತಿದ್ದಾರೆ. ಈ ದಿಸೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಅಧಿಕಾರಿಗಳು ಈ ಬಗ್ಗೆ ನ್ಯಾಯಾಲಯದ ಹಾಗೂ ಕೇಂದ್ರ ಸರ್ಕಾರದ ಆದೇಶದಂತೆ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದೇ ಹೋದರೆ ಪಾಲಿಕೆ ಆವರಣದಲ್ಲಿಯೇ ವ್ಯಾಪಾರ ಕೈಗೊಳ್ಳಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ ಮೇಸ್ತ್ರಿ, ಯಮನೂರ ಗುಡಿಗಾಳ, ಇಸ್ಮಾಯಿಲ್, ರಿಯಾಜ್,‌ ರೋಹಿತ ಗಾಮನಗಟ್ಟಿ, ರೇವಣಸಿದ್ದಪ್ಪ ಹೊಸಮನಿ ಸೇರಿದಂತೆ ಮುಂತಾದವರು ಇದ್ದರು.

Tags:

error: Content is protected !!