Belagavi

ಬಿ.ಕೆ.ಮಾಡೆಲ್ ಪ್ರೌಢಶಾಲೆಯಲ್ಲಿ ಇಂಗ್ಲೀಷ ಶಿಕ್ಷಕರ ಕಾರ್ಯಾಗಾರ

Share

ಬೆಳಗಾವಿ ಬಿ.ಕೆ. ಮಾಡೆಲ್ ಪ್ರೌಢಶಾಲೆಯಲ್ಲಿ ದ್ವಿತೀಯ ಭಾಷೆ ಇಂಗ್ಲೀಷ ಶಿಕ್ಷಕರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಮತ್ತು ಮರಾಠಿ ಮಾಧ್ಯಮ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದ ಈ ಕಾರ್ಯಾಗಾರವನ್ನು ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ಉದ್ಘಾಟಿಸಿದರು.ಬೆಳಗಾವಿ ಬಿ.ಕೆ. ಮಾಡೆಲ್ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದ್ವಿತೀಯ ಭಾಷೆ ಇಂಗ್ಲೀಷ ಶಿಕ್ಷಕರ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಉದ್ಘಾಟಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಮಾತನಾಡಿ, ಭಾಷೆ ಸಂವಹನದ ಮಾಧ್ಯಮವಾಗಿದೆ. ಅದು ನಮ್ಮ ಭಾವನೆಗಳ ಅಭಿವ್ಯಕ್ತಿಗೆ, ವಿಚಾರಗಳ ಪ್ರಸಾರಕ್ಕೆ ಮಾಧ್ಯಮವಾಗಿದೆ. ಭಾಷಾ ಜ್ಞಾನಕ್ಕೆ ಮೂಲಾಧಾರವಾದ ಶಬ್ದ ಭಾಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ಇದು ಓದಿನಿಂದ ಮಾತ್ರ ಸಾಧ್ಯವಾಗುತ್ತದೆ. ಜ್ಞಾನದ ಸಂಪಾದನೆ ಶಬ್ದಗಳ ಸಂಗ್ರಹಕ್ಕೂ ನೆರವಾಗುತ್ತದೆ. ಜ್ಞಾನ ಸಂಪಾದನೆ ಶಿಕ್ಷಕರ ಸಂಪನ್ಮೂಲವಾಗಬೇಕು ಎಂದರು.

ಡಿಡಿಪಿಐ ಎ.ಬಿ. ಪುಂಡಲೀಕ ಕಾರ್ಯಾಗಾರಕ್ಕೆ ಭೇಟಿ ನೀಡಿದರು. ಪ್ರಾಚಾರ್ಯ ಎಸ್.ಎ.ಚಾಟೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಏಕನಾಥ ಪಾಟೀಲ, ರೇಖಾ ನಾಯಕ, ಮೇಘಶ್ಯಾಮ ಭೋಸಲೆ, ಪ್ರೊ. ಮಾಯಪ್ಪ ಪಾಟೀಲ, ಮೃಣಾಲಿನಿ ಪಾಟೀಲ, ದೀಪಂ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

Tags:

error: Content is protected !!