ಬೆಳಗಾವಿ: ಮಾನ್ಯ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರು ಡಿಸೆಂಬರ್ 23 2020 ರಂದು ನೀಡಿದ ಆದೇಶದನ್ವಯ ಇ-ಪೋರ್ಟಲ್‍ನಲ್ಲಿ ನಮೂದಿಸಿದ ನೋಂದಣಿಯಾಗದೇ ಬಾಕಿಯಿರುವ / ಮಾರ್ಚ್.31, 2020 ರವರೆಗೆ ಮಾರಾಟವಾಗಿ ಇ-ವಾಹನ ಪೋರ್ಟಲ್‍ನಲ್ಲಿ ನಮೂದಿತವಾಗಿ
ನೋಂದಣಿಯಾಗದೇ ಉಳಿದಿರುವ ಭಾರತ್ ಸ್ಟೇಜ್-4 ಮಾಪನದ ಎಲ್ಲಾ ವಾಹನಗಳನ್ನು ಜನೇವರಿ 16 2021 ರವರೆಗೆ ನೋಂದಣಿ ಮಾಡಿಕೊಳ್ಳಲ್ಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಳಗಾವಿ ನೋಂದಣಿ ಪ್ರಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.