Vijaypura

ಬಿ ಎಸ್ ವೈ ಸರ್ಕಾರದಲ್ಲಿ ಸಚಿವ ಆಗಬಾರದು ಎಂದು ನಿರ್ಣಯ ಮಾಡಿದ್ದೇನೆ: ಶಾಸಕ ಯತ್ನಾಳ…

Share

ನಾನು ಮಂತ್ರಿ ಆಗಬಾರದು ಎಂದು ನಿರ್ಣಯ ಮಾಡಿದ್ದೇನೆ, ಯಡಿಯೂರಪ್ಪನವರ ಸರ್ಕಾರದಲ್ಲಿ ನಾನು ಸಚಿವನಾಗೊದಿಲ್ಲ, ಬಿ ಎಸ್ ವೈ ಸರ್ಕಾರದಲ್ಲಿ ಸಚಿವ ಆಗಬಾರದು ಎಂದು ನಿರ್ಣಯ ಮಾಡಿದ್ದೇನೆ, ಅವರು ನನಗೆ ಸಚಿವ ಆಗಿ ಎಂದು ಅವರು ಹೇಳೋದೆ ಇಲ್ಲ, ಎಂಬ ಆ ವಿಶ್ವಾಸ ನನಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಳ್ ಹೇಳಿದ್ದಾರೆ.

ವಿಜಯಪುರ ದಲ್ಲಿ ಮಾತನಾಡಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತೋ ಪುನರ್ ರಚನೆ ಆಗುತ್ತೊ ನನಗೆ ಗೊತ್ತಿಲ್ಲ, ಮಹತ್ವದ ನಿರ್ಣಯ ತೆಗೆದುಕೊಳ್ಳಲು ಅಮೀತ್‌ ಷಾ ಕರೆಯಿಸಿಕೊಂಡಿದ್ದಾರೆ ಎಂದು ನನಗೆ ಎನಿಸುತ್ತೆ ಎಂದರು. ಪ್ರಧಾನಿ ಮೋದಿ ಹಾಗೂ ಅಮೀತ್ ಷಾ ಅವರು ಪ್ರಾದೇಶಿಕವಾರು, ಜಿಲ್ಲಾವಾರು, ಜಾತಿವಾರು ಗಂಭೀರವಾಗಿ ಪರಿಗಣಿಸಿ ಏನು ಬದಲಾವಣೆ ಮಾಡ್ತಾರೋ ಗೊತ್ತಿಲ್ಲ, ಸಚಿವ ಸಂಪುಟ ವಿಸ್ತರಣೆ ಆಗುತ್ತದೋ ಪುನರ್ ರಚನೆ ಆಗತ್ತೋ ಅದು ಗೊತ್ತಿಲ್ಲ, ಮಹತ್ವದ ನಿರ್ಣಯ ಕೈಗೊಳ್ಳಲು ಕರೆಯಿಸಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದರು.

ಇನ್ನೂ ಯತ್ನಾಳ್ ವಿರುದ್ಧ ಶಿಸ್ತುಕ್ರಮ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ಅದು ಬಂದಿಲ್ಲ, ನೋಟಿಸ್ ವಿಚಾರವೇ ಈಗ ಉದ್ಭವಿಸಲ್ಲ, ಅದು ಮಾಧ್ಯಮಗಳ ಹಾಗೆ ಬರುತ್ತಿದೆ ಎಂದರು. ಇನ್ನೂ ಸಚಿವ ಸ್ಥಾನದ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ನಾನು ಮಂತ್ರಿ ಆಗಬಾರದು ಎಂದು ನಿರ್ಣಯ ಮಾಡಿದ್ದೇನೆ, ಯಡಿಯೂರಪ್ಪ ನವರ ಸರ್ಕಾರದಲ್ಲಿ ನಾನು ಸಚಿವನಾಗೊದಿಲ್ಲ, ಬಿ ಎಸ್ ವೈ ಸರ್ಕಾರದಲ್ಲಿ ಸಚಿವ ಆಗಬಾರದು ಎಂದು ನಿರ್ಣಯ ಮಾಡಿದ್ದೇನೆ, ಅವರು ನನಗೆ ಸಚಿವ ಆಗಿ ಎಂದು ಅವರು ಹೇಳೋದೆ ಇಲ್ಲ, ಎಂಬ ಆ ವಿಶ್ವಾಸ ನನಗಿದೆ.

ನಾನು ಮಂತ್ರಿ ಸ್ಥಾನ ಬೇಡೋದಿಲ್ಲ, ನನಗೆ ಸಚಿವ ಸ್ಥಾನದ ಮೇಲೆ ಆಸೆಯೂ ಇಲ್ಲ. ನಾನು ಮಂತ್ರಿಯಾಗೊದ್ರಿಂದ ದೊಡ್ಡ ಲಾಭವೇನು ಆಗೊದಿಲ್ಲ ಎಂದರು. ಇನ್ನೂ ಯತ್ನಾಳ್ ವಿರುದ್ಧ ಶಿಸ್ತುಕ್ರಮದ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಪ್ರಧಾನಿ, ಗೃಹ ಸಚಿವರಿಗೆ ದೇಶದಲ್ಲಿ ಅವರದ್ದೆಯಾದ ದೊಡ್ಡ ನೆಟ್ವರ್ಕ್ ಇದೆ, ಯಾವ ಶಾಸಕ ಯಾವಾಗ ಎಲ್ಲಿ ಇರ್ತಾನೆ, ಸಚಿವ, ಮುಖ್ಯಮಂತ್ರಿ ಏನ್ ಮಾಡ್ತಾರೆ ಅನ್ನೊದೆಲ್ಲವು ಅವರ ಗಮನಕ್ಕಿರುತ್ತೆ, ಅವರಿಗೆ ಮುಂದಿನ ಬಿಜೆಪಿ ನಾಯಕನನ್ನಾಗಿ ಯಾರನ್ನ ಮಾಡ್ಬೇಕು ಅನ್ನೋದು ಗೊತ್ತಿದೆ ಎಂದರು…

Tags:

error: Content is protected !!