ಮೈ ಮೇಲೆ ಬಿಸಿ ನೀರು ಬಿದ್ದ ಪರಿಣಾಮ ನೋವನ್ನು ತಾಳಲಾರದೆ ಒಂದೂವರೇ ವರ್ಷದ ಮಗು ನರಳಿ ಸಾನವನಪ್ಪಿರುವ ಹೃದಯ ವಿದ್ರಾವಕ ದುರ್ಘಟನೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಮೃತ ದುರ್ದೈವಿ ಅಸುಂಡಿ ಗ್ರಾಮದ ಸವಿತಾ ಹಾಳಮನಿ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಂದೆ ಶ್ರೀಕಾಂತ ಶಿವಪ್ಪ ಹಾಳಮನಿ ಪೊಲೀಸ್ ಪೇದೆಯಾಗಿಯಾಗಿದ್ದು. ರಜೆ ಕಾರಣಕ್ಕೆ ಕುಟುಂಬಸ್ಥರು ಜತೆ ಗ್ರಾಮಕ್ಕೆ ತೆರಳಿದ್ದರು. ಪ್ರತಿದಿನದಂತೆ ತಾಯಿ ಮಗುವಿಗೆ ಸ್ನಾನ ಮಾಡಿಸಲು ನೀರನ್ನು ಕಾಯಿಸಿ ಸ್ನಾನದ ಕೋಣೆಯಲ್ಲಿ ಇರಿಸಿದ್ದಾರೆ. ದುರ್ದೈವ ನೀರು ವಿಪರಿತವಾಗಿ ಬಿಸಿಯಾಗಿದೆ. ಈ ವೇಳೆ ಮಗು ಆಟವಾಡುತ್ತಾ ಕೋಣೆಗೆ ತೆರಳಿದೆ. ಬಿಸಿ ನೀರು ತುಂಬಿದ ಬಕೆಟ್‍ನ್ನು ಏಳೆದಿದರಿಂದ ನೀರು ಮೈಮೇಲೆ ಬಿದ್ದಿದೆ, ಎಚ್ಚೆತ್ತ ಪೆÇೀಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಗಂಭೀರ ಗಾಯಗೊಂಡ ಮಗುವಿನ ಸ್ಥಿತಿಗೆ ಚಿಕಿತ್ಸೆ ಫಲಿಸದೆ, ನೋವನ್ನು ತಾಳಲಾದರೆ ಕಂದಮ್ಮ ಕೊನೆಯುಸಿರೆಳೆದಿದೆ.