Politics

ಬಿಜೆಪಿ ಶಾಸಕನಾದ ನನಗೆ ರೂ. 100 ಕೋ. ನೀಡಲಿಲ್ಲ, ಆದ್ರೆ ಜಮೀರ ಅಹ್ಮದಖಾನ್ ಗೆ ರೂ. 200 ಕೋ. ನೀಡಿದ್ದಾರೆ;ಶಾಸಕ ಯತ್ನಾಳ ಆಕ್ರೋಶ

Share

ಬಿಜೆಪಿ ಶಾಸಕನಾದ ನನಗೆ ರೂ. 100 ಕೋ. ನೀಡಲಿಲ್ಲ, ಆದ್ರೆ ಜಮೀರ ಅಹ್ಮದಖಾನ್ ಗೆ ರೂ. 200 ಕೋ. ನೀಡಿದ್ದಾರೆ. ಅವನು ಹಿಂದುಗಳನ್ನು ನಾಶ ಮಾಡುತ್ತಾನೆ, ಸಬ್ ಕೋ ಖತಂ ಕರೆಂಗೆ ಎಂದಿದ್ದಕ್ಕೆ ಅನುದಾನ ನೀಡುತ್ತಾರೆ ಅದೇ ಹಿಂದುಗಳ ಪರ ಮಾತನಾಡುವವರಿಗೆ ಭದ್ರತೆ ಹಿಂಪಡೆದಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಆಕ್ರೋಧ ವ್ಯಕ್ತಪಡಿಸಿದರು‌.

ವಿಜಯಪುರ ದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನಾನು ಅಭಿವೃದ್ದಿ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೀಡಿದ್ದ ಭದ್ರತೆ ಹಿಂಪಡೆದಿದ್ದಾರೆ, ನಾವು ಕೇಳಿದರೆ ಹಣ ಇಲ್ಲ ಅಂತಾರೆ ಆದ್ರೆ ಅದೇ ಜಮೀರ ಅಹ್ಮದಖಾನ್ ಕೇಳಿದರ ಹಣ ನೀಡುತ್ತಾರೆ ಅಲ್ಲದೆ ನಾಲ್ಕೈದು ಜನ ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ, ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದರು‌. ವಿಜಯಪುರದಲ್ಲಿ ಬಿಜೆಪಿ ಶಾಸಕ ಯತ್ನಾಳ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ಪಡಿಸುತ್ತಾ ಹಿಂದುಗಳನ್ನು ವಿರೋಧಿಸು ವವರಿಗೆ ರೂ. 200 ಕೋ. ನೀಡ್ತಾರೆ, ಹಾಗೂ ರಾಮ, ಸೀತೆ, ಭ್ರಹ್ಮ, ಸರಸ್ವತಿ, ಬಗ್ಗೆ ಹಿಂದೂ ದೇವಾನು ದೇವತೆಗಳ ಬಗ್ಗೆ ಅಪಮಾನ ಮಾಡಿದವರಿಗೆ ಸಚಿವ ಸ್ಥಾನ ನೀಡ್ತಾರೆ, ಇನ್ನೂ ಅತೃಪ್ತ ಶಾಸಕರು ಅಮಿತ್ ಶಾ ಭೇಟಿ ಬಗ್ಗೆ ಗೊತ್ತಿಲ್ಲ, ನಾನು ಸೋಮವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ, ಮಂಗಳವಾರ ಯಾರನ್ನು ಭೇಟಿಯಾಗುವ ಬಗ್ಗೆ ಚಿಂತಿಸುತ್ತೇನೆ ಎಂದರು.

ಇನ್ನೂ ಜಗದೀಶ ಶೆಟ್ಟರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಜಗದೀಶ ಶೆಟ್ಟರ ಅವರಂತೆ ನಾನೇನು ಕೀಳು ರಾಜಕಾತಣ ಮಾಡುವುದಿಲ್ಲ, ನಾನೇನು ಸಿಎಂ ಆದ ಬಳಿಕ ಸಚಿವನಾಗಿಲ್ಲ, ಅವರು ಸಚಿವರಾಗುವ ಅವಶ್ಯಕತೆ ಇರಲಿಲ್ಲ, ಯುವಕರಿಗೆ ಅವಕಾಶ ನೀಡಬಹುದಿತ್ತು ಎಂದು ಜಗದೀಶ ಶೆಟ್ಟರ ವಿರುದ್ದ ಅಸಮಾನ ವ್ಯಕ್ತಪಡಿಸಿದರು. ನಾನ್ಯಾರ ಬಳಿಯೀ ಸಚಿವ ಸ್ಥಾನ‌ ನೀಡುವಂತೆ ಕೇಳಿಲ್ಲ, ಶೆಟ್ಟರ್ ಸುಮ್ಮನೆ ನನ್ನ ಬಗ್ಗೆ ಮಾತನಾಡಬಾರದು, ನನ್ನ ಬಳಿ ಬಹಳ‌‌ಜನರ ಇತಿಹಾಸವಿದೆ ಎಂದರಲ್ಲದೇ ಈಶ್ವರಪ್ಪ ನನ್ನ ಬಗ್ಗೆ ಮಾತನಾಡಬಾರದು, ನಾನೆಂದೂ ಸಚಿವರನ್ನಾಗಿ‌ ಮಾಡಿ ಅಂತ ಈಶ್ವರಪ್ಪ ಅವರ ಬಳಿ ಹೋಗಿಲ್ಲ, ನಾನೆಂದೂ ಲಾಬಿ ಮಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ನನ್ನನ್ನು ಬಿಜೆಪಿಯಿಂದ ಆರು ವರ್ಷ ಉಚ್ಛಾಟಿಸಿದ್ದರಿಂದ ಜೆಡಿಎಸ್ ಸೇರಿದ್ದೆ, ಅದನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿಲ್ಲಾ, ನಾನು ತಾವತ್ತಾದರೂ ಸಚಿವ ಸ್ಥಾನ ಕೇಳಿದ್ದೀನಾ ಎಂಬ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ನನ್ನ ಮಾತಿಗೆ ಸಿಎಂ‌ ಉತ್ತರಿಸಲ್ಲ, ಸಚಿವರ ಮೂಲಕ‌ ಉತ್ತರ ಕೊಡಿಸುತ್ತಾರೆ ಎಂದು ಹೇಳಿದರು. ಇನ್ನೂ ಪಕ್ಷದಲ್ಲಿದ್ದ ಅನಂತಕುಮಾರ ಅವರಂಥ ಒಳ್ಳೆಯವರು ಹೋಗಿದ್ದಾರೆ, ನಮ್ಮಂಥ ಪ್ರಾಮಾಣಿಕರು ಒದರಾಡುತ್ತ ಹೋಗುವಂತಾಗಿದೆ, ಕರ್ನಾಟಕದ ವಿಚಾರಗಳನ್ನು ದೆಹಲಿಗೆ ಮುಟ್ಟಿಸುವವರೇ ಇಲ್ಲ ಎಂದು ಹೇಳಿದರು..

Tags:

error: Content is protected !!