ಬಿಜೆಪಿಗೆ ಸರ್ಕಾರ ನಡೆಸಲು ಬರುವುದಿಲ್ಲ ಇಲ್ಲಿರುವ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಬ್ಯೂಸಿಯಾಗಿದ್ದಾರೆ.ಬಿಜೆಪಿಗೆ ಏನು ಹೇಳಿದರು ಕೇಳುವುದಿಲ್ಲ ಅವರು ದಪ್ಪ ಚರ್ಮದವರು ಅವರಿಗೆ ನೈತಿಕತೆಯೇ ಇಲ್ಲ ಎಂದು ಕೆಪಿಸಿಸಿ ಮುಖಂಡ ಸಲೀಂ ಅಹ್ಮದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಬಿಜೆಪಿಯವರು ಯುವ ಸಮುದಾಯವನ್ನು ಹಾಗೂ ಕಾಂಗ್ರೆಸ್ ಯುವ ಮುಖಂಡರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸೋಮವಾರ ಕೆಪಿಸಿಸಿಯಿಂದ ಸಂಕಲ್ಪ ಸಮಾವೇಶ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದ ಎಂದರು.
ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರನ್ನ ಗುರಿಯಾಗಿಟ್ಟುಕೊಂಡು ಸಮಾವೇಶ ಆಯೋಜನೆ ಮಾಡಲಾಗಿದ್ದು,ಬೆಳಗಾವಿ ವಿಭಾಗದ ನೂರಾರು ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಪಕ್ಷ ಸಂಘಟನೆ, ಸಂಘರ್ಷ ಹಾಗೂ ಹೋರಾಟವೇ ಸಮಾವೇಶದ ಉದ್ದೇಶ.ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡುವ ಉದ್ದೇಶದಿಂದ ಸಂಕಲ್ಪ ಸಮಾವೇಶ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಲೋಕಸಭಾ ಸದಸ್ಯರು ತಮ್ಮ ಕ್ಷೇತಗಳಲ್ಲಿ ಹುಲಿಗಳಂತೆ ಘರ್ಜಿಸುತ್ತಾರೆ. ಆದರೆ ಮೋದಿಯವರ ಮುಂದೆ ಬೆಕ್ಕುಗಳಾಗಿರುತ್ತಾರೆ. ಬಿಜೆಪಿ 30 ಪರ್ಸೆಂಟ್ ಸರ್ಕಾರವಾಗಿದೆ.ಜನರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸಲೀಂ ಅಹಮ್ಮದ ಕಿಡಿಕಾರಿದರು.