Uncategorized

ಬಸ್ಸಾಪುರ ದೇವಸ್ಥಾನ ಜೀರ್ಣೋದ್ಧಾರಕ್ಕೆ 3 ಲಕ್ಷ ರೂ. ಅನುದಾನ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

Share

ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಹುಲಿಕಟ್ಟಿ ಬಸ್ಸಾಪುರ ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ಜೀರ್ಣೋದ್ಧಾರದ ಸಲುವಾಗಿ ಶಾಸಕರ ನಿಧಿಯ ವತಿಯಿಂದ 3 ಲಕ್ಷ ರೂ ಅನುದಾನ ಒದಗಿಸಲಾಗಿದೆ. ಮೊದಲ ಕಂತಿನಲ್ಲಿ ಒಂದು ಲಕ್ಷ ರೂ,ಗಳ ಚೆಕ್ ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ದೇವಸ್ಥಾನದ ಕಮೀಟಿಯವರಿಗೆ ಬುಧವಾರ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಸಿ ಪಾಟೀಲ, ಸುರೇಶ ಇಟಗಿ, ಅಡಿವೇಶ ಇಟಗಿ, ಚಂಬಣ್ಣ ಉಳೇಗಡ್ಡಿ, ಸಿದ್ದನಗೌಡ ಪಾಟೀಲ, ಶ್ರೀಕಾಂತ ಮದುಭರಮಣ್ಣವರ, ಸೈಯದ್ ಸನದಿ, ಆನಂದಗೌಡ ಪಾಟೀಲ, ರವಿ ಬಾಗೇವಾಡಿ, ಮಹೇಶ ಬಾಗೇವಾಡಿ, ಘಟಿಗೆಪ್ಪ ಗುರವಣ್ಣವರ, ಬಿ ಜಿ ವಾಲಿಇಟಗಿ, ಅನಿಲ ಪಾಟೀಲ, ಮೀರಾಸಾಬ್ ನದಾಪ್, ಮಹಾಂತೇಶ ಘೋಡಗೇರಿ, ದೇಮಣ್ಣ ಧರೆಪ್ಪನವರ, ಗೌಸಮೊದ್ದಿನ ಜಾಲಿಕೊಪ್ಪ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!