Belagavi

ಬಸ್ತವಾಡದಲ್ಲಿ 5 ಕೋಟಿ ರೂ. ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ

Share

ಬೆಳಗಾವಿ-ಬಸ್ತವಾಡ ಗ್ರಾಮದಿಂದ ಕೊಂಡಸಕೊಪ್ಪ ಗ್ರಾಮದವರೆಗೆ ನೂತನವಾಗಿ ನಿರ್ಮಾಣಗೊಂಡ ಡಾಂಬರ್ ರಸ್ತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.

ಬಸ್ತವಾಡ ಗ್ರಾಮದಲ್ಲಿ ಈವರೆಗೆ ಸುಮಾರು ೫ ಕೋಟಿ ರೂ. ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದ್ದು, ಈ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಗ್ರಾಮ ಹಿಂದೆ0ದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಆಯ್ಕೆ ಮಾಡಿರುವುದು ನಮ್ಮ ಪಾಲಿಗೆ ಸಾರ್ಥಕವೆನಿಸಿದೆ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಹೇಳಿದರು.
ಗ್ರಾಮಸ್ಥರ ಪ್ರೀತಿ, ಪ್ರೋತ್ಸಾಹ ಹಾಗೂ ವಾತ್ಸಲ್ಯಭರಿತ ಸನ್ಮಾನಕ್ಕೆ ಪಾತ್ರವಾಗಿರುವುದು ನನಗೆ ಖುಷಿ ನೀಡಿದೆ. ನಾನು ಇಷ್ಟೊಂದು ವೇಗವಾಗಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವುದಕ್ಕೆ ಕ್ಷೇತ್ರದ ಜನರ ನಿರಂತರ ಸಹಕಾರ, ಪ್ರೋತ್ಸಾಹವೇ ಕಾರಣ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಅಪ್ಪಯ್ಯ ಬಾಗಣ್ಣವರ, ಮಹಾವೀರ ಸಂಕೇಶ್ವರಿ, ಭರತೇಶ ಸಂಕೇಶ್ವರಿ, ಮಾನಿಕ್ ಕಾಕಾ, ಮನೋಹರ ಮುಚ್ಚಂಡಿ, ಅಜಿತ ಬಾಗಣ್ಣವರ, ಅರ್ಜುನ ಪಾಟೀಲ, ಮನೋಹರ ಬಾಂಡಗಿ, ಗುಂಡು ಚೌಗುಲೆ, ರಾಜು ಬಡವಣ್ಣವರ, ರಾಮಾ ಕಾಕತ್ಕರ್, ರಾಮಾ ಚೌಗುಲೆ, ಪಾರಿಸ್ ಪಾಟೀಲ, ಶ್ರೀನಿಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!