Belagavi

ಬಡ ಕುಟುಂಬಗಳಿಗೆ ಆಶ್ರಯ ಮನೆ ನೀಡುವಂತೆ ಆಗ್ರಹಿಸಿ ಜೈ ಭೀಮ್ ಓಂ ಸಾಯಿ ಯೂನಿಯನ್ ಧರಣಿ

Share

1974ರಲ್ಲಿ ಮುಳುಗಡೆಯಾದ ನಂತರ ಬೆಳಗಾವಿ ನಗರದ ವಿವಿಧೆಡೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಜನರು ಕಳೆದ 15 ವರ್ಷಗಳಿಂದ ಆಶ್ರಯ ಮನೆಗಳಿಗಾಗಿ ಹೋರಾಟ ಮಾಡುತ್ತಿದ್ದರೂ ಇವರಿಗೆ ಸೂರು ಮಾತ್ರ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡು ಜೈ ಭೀಮ್ ಓಂ ಸಾಯಿ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಹೌದು 1974ರಲ್ಲಿ ಮುಳುಗಡೆಯಾದ ನಂತರ ನೂರಾರು ಬಡ ಕುಟುಂಬಗಳು ಬೆಳಗಾವಿ ವಂಟಮೂರಿ ಕಾಲೋನಿ, ಚವ್ಹಾಟ ಗಲ್ಲಿ, ರುಕ್ಮೀಣಿ ನಗರ ಸೇರಿದಂತೆ ಮುಂತಾದ ಕಡೆಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ. ಕಳೆದ 15 ವರ್ಷಗಳಿಂದ ತಮಗೆ ಆಶ್ರಯ ಮನೆಗಳನ್ನು ನೀಡುವಂತೆ ಹೋರಾಟ ಮಾಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಇವರ ಬೇಡಿಕೆ ಈಡೇರಿಸಿಲ್ಲ. ಇದರಿಂದ ಆಕ್ರೋಶಗೊಂಡಿರುವ ಈ ನೂರಾರು ಕುಟುಂಬಗಳು ಸೋಮವಾರ ಜೈ ಭೀಮ್ ಓಂ ಸಾಯಿ ಯೂನಿಯನ್ ನೇತೃತ್ವದಲ್ಲಿ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಮಗೆ ಆಶ್ರಯ ಮನೆ ನೀಡುವಂತೆ ಆಗ್ರಹಿಸಿದರು.

ಈ ವೇಳೆ ಜೈ ಭೀಮ್ ಓಂ ಸಾಯಿ ಯೂನಿಯನ್ ಅಧ್ಯಕ್ಷ ರಾಜು ಟೊಂಬರೆ ಮಾತನಾಡಿ ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿರುವ ಈ ಬಡ ಕುಟುಂಬಗಳು ತೀರಾ ಸಂಕಷ್ಟದಲ್ಲಿವೆ. ಯಾರಿಗೆ ಮನೆಯಿವೆ ಅಂತಹವರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಹೀಗಾಗಿ ತಕ್ಷಣವೇ ಈ ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶ್ರೀಕಾಂತ ಟಿಂಬರೆ, ಚರಣಸಿಂಗ್ ದಮೋನೆ, ಇಮ್ರಾನ್ ಜಮಾದಾರ್, ಅನಿಲ್ ಟೊಂಬರೆ, ಗೋದಾಬಾಯಿ ಬಾದಾಮಿ, ಸೋನಾಬಾಯಿ ಕದಂ, ಸುಲೋಚನಾ ಬಾದಾಮಿ, ಸುಶೀಲಾ ಮಾಳಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!