ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಮಹಾರ್ಯಾಲಿ ನಡೆಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಜನವರಿ 14ರಿಂದ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವ ಪಾದಯಾತ್ರೆಯು ಬೆಂಗಳೂರಿನವರೆಗೆ 700 ಕಿಲೋಮೀಟರ ಆಗುತ್ತೆ ಬೆಳಗ್ಗೆ 10 ಕಿಮೀ ಸಂಜೆ 10 ಕೀಮೀ ದಿನಕ್ಕೆ 20 ಕಿಮೀ ಆಗುತ್ತೆ ಅಂದ್ರೆ ನಾವು 35 ದಿನಕ್ಕೆ ಬೆಂಗಳೂರು ತಲುಪುತ್ತೇವೆ ಕ್ಲೋಸಿಂಗ್ ಡೇಟ ಇನ್ನೂ ನಾವೂ ಅನೌನ್ಸ ಮಾಡಿಲ್ಲ ಯಾಕಂದ್ರೆ ಸರಕಾರ ಯಾವಾಗ ಬಜೆಟ್ ಅಧಿವೇಶನದ ಶುರು ಮಾಡುತ್ತೋ ಆ ಸಂದರ್ಭದಲ್ಲಿ ಕ್ಲೋಸಿಂಗ್ ಡೇಟ ಅನೌನ್ಸ ಮಾಡಬೇಕೆಂದು ನಿರ್ಣಯಿಸಿದ್ದೇವೆ ಎಂದರು. ಬಜೆಟ್ ಅಧಿವೇಶನ ಯಾವಾಗ ಶುರುವಾಗುತ್ತೋ ಅದೇ ಟೈಮ್‍ಗೆ ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕೆಂದು ನಿರ್ಧಾರ ಮಾಡಿದ್ದೇವೆ ಅವರೇನು ಮಾಡ್ತಿದ್ದಾರೆ ಅಂದ್ರೆ ಶ್ರೀಗಳ ಪಾದಯಾತ್ರೆ ಮುಗಿದ ಮೇಲೆ ಅಧಿವೇಶನ ಮಾಡಬೇಕು ಅನ್ಕೊಂಡಿದ್ದಾರೆ ಆದ್ರೆ ನಾವು ಅಧಿವೇಶನ ಶುರುವಾಗ್ತಿದ್ದ ಹಾಗೆ ಪಾದಯಾತ್ರೆ ಮಯಕ್ತಾಯಗೊಳಿಸುತ್ತೇವೆ ಯಾಕೆಂದರೆ ಅಲ್ಲಿ ನಮ್ಮ ಎಲ್ಲ 58 ಎಮ್‍ಎಲ್‍ಎಗಳು ನಮಗೆ ಸಿಕ್ತಾರೆ ನಾನು ಕೇಳ್ತಿರೋದು ನನ್ನ ಸ್ವಾರ್ಥಕ್ಕಾಗಿ ಅಲ್ಲ ಪಂಚಮಸಾಲಿ ಸಮಾಜಕ್ಕಾಗಿ ಎಂದು ಇದೇ ವೇಳೆ ಸ್ವಾಮೀಜಿ ಸ್ಪಷ್ಟಪಡಿಸಿದರು.
ಬೆಂಗಳೂರಿಗೆ ತಲುಪಿದ ನಂತರ ನಾವು ಅಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್ ರ್ಯಾಲಿ ನಡೆಸುತ್ತೇವೆ ನಾವು ಸರಕಾರಕ್ಕೆ ನಮ್ಮ ಹೋರಾಟದ ಬಿಸಿ ಮುಟ್ಟಿಸುತ್ತೇವೆ ನಮ್ಮ ಹೋರಾಟಕ್ಕೆ ಸ್ಪಂದನೆ ಸಿಗದೇ ಹೋದಲ್ಲಿ ನಮ್ಮ ಮಹಿಳಾ ಘಟಕದವರು ಕೂಡ ಈಗಾಗಲೇ ತಿಳಿಸಿದ್ದಾರೆ ನೀವು ಹೋಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ನಾವೂ ಕೂಡ ಅಲ್ಲಿಗೆ ಬಂದು ಬೆಂಗಳೂರಿನ ಟೌನ್‍ಹಾಲ್ ಮುಂಭಾಗದಲ್ಲಿ ಚನ್ನಮ್ಮಳ ಪ್ರತಿಮೆಗೆ ಪೂಜೆ ಸಲ್ಲಿಸಿ ನಾವೂ ಕೂಡ ಧರಣಿ ಕುಳಿತು ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ ಈಗಾಗಲೇ ಥರ್ಡ ಬಿ ನೀಡಿದ್ದು 2ಎ ಮೀಸಲಾತಿಗೆ ನಾವು ಆಗ್ರಹಿಸುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ರೋಹಿಣಿ ಬಾಬಾಸಾಹೇಬ ಪಾಟೀಲ್, ಮುಖಂಡರಾದ ಡಾ.ರವಿ ಪಾಟೀಲ್, ಬಸವರಾಜ್ ರೊಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.