Uncategorized

ಪ್ಲೈವುಡ್ ಫ್ಯಾಕ್ಟರಿಗೆ ಬೆಂಕಿ..4 ಲಕ್ಷ ಮೌಲ್ಯದ ಸಾಮಗ್ರಿ ಹಾನಿ

Share

ಪ್ಲೈವುಡ್ ಫ್ಯಾಕ್ಟರಿಗೆ ಬೆಂಕಿ ಹತ್ತಿದ ಪರಿಣಾಮ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಳಗಾವಿಯ ಆಟೋನಗರದಲ್ಲಿ ತಡರಾತ್ರಿ ಸಂಭವಿಸಿದೆ.

ಆಟೋ ನಗರದ ಹನ್ಸಿಕಾ ಹೆಸರಿನ ಪ್ಲೈವುಡ್ ಫ್ಯಾಕ್ಟರಿಗೆ ರವಿವಾರ ತಡರಾತ್ರಿ 3 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಈ ವೇಳೆ ಅಗ್ನಿಶಾಮಕ ದಳದ ಸುಮಾರು ಮೂರು ಗಾಡಿಗಳು ಆಗಮಿಸಿದ್ದವು. ಸತತ ಎರಡೂವರೆ ಗಂಟೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಕಾಂತಿಲಾಲ್ ಪಟೇಲ್ ಅವರಿಗೆ ಸೇರಿದ ಪ್ಲೈವುಡ್ ಫ್ಯಾಕ್ಟರಿ ಇದಾಗಿದ್ದು. ಈ ಬೆಂಕಿ ಅವಘಡದಲ್ಲಿ ಅಂದಾಜು 4 ಲಕ್ಷ ಮೌಲ್ಯದ ಪ್ಲೈವುಡ್ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಈ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಕಿ ಹತ್ತಲು ನಿಖರ ಕಾರಣ ತಿಳಿದು ಬಂದಿಲ್ಲ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

Tags:

error: Content is protected !!