ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ವೇಳೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಮಾಧ್ಯಮಗಳೊಂದಿಗೆ ಮಾತನಾಡುವಾಗಲೇ ಅಸ್ವಸ್ಥಗೊಂಡು ಕುಸಿದು ಕುಳಿತರು. ಎದ್ದು ನಿಲ್ಲಲೂ ಆಗದೇ ಕಣ್ಣಿಗೆ ಕತ್ತಲು ಬಂದವರಂತೆ ಕೈಯಾಡಿಸುತ್ತಿದ್ದ ಅವರನ್ನು ಪೊಲೀಸರು ಬಸ್ ಹತ್ತಿಸಲು ಪ್ರಯತ್ನಿಸಿದರು. ಆದರೆ ಮೆಟ್ಟಿಲ ಮೇಲೆಯೇ ಡಾ.ಅಂಜಲಿ ಕೆಲಹೊತ್ತು ಕುಳಿತರು.
ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ವೇಳೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಹೇಳುತ್ತಿರುವಾಗಲೇ ತೀವ್ರ ಅಸ್ವಸ್ಥಗೊಂಡರು.
ನಡೆಯಲಾಗದ ಸ್ಥಿತಿಯಲ್ಲಿದ್ದ ಡಾ.ಅಂಜಲಿ ಅವರನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಕೈ ಹಿಡಿದು ಬಸ್‍ವರೆಗೆ ಕರೆ ತಂದರು. ಆದರೆ ಬಸ್ ಏರಲಾಗದೇ ಖಾಲಿ ಕೈಯನ್ನು ಗಾಳಿಯಲ್ಲಿ ತೇಲಿಸುತ್ತಿದ್ದ ಡಾ.ಅಂಜಲಿ ನಿಂಬಾಳ್ಕರ್ ತಮಗೇನೂ ಕಾಣುತ್ತಿಲ್ಲ ಎಂಬುದನ್ನು ಹೇಳಿಕೊಂಡರು. ಬಸ್ ಮೆಟ್ಟಿಲ ಮೇಲೆಯೇ ಕುಸಿದು ಕುಳಿತರು.
ಕೊನೆಗೆ ಪೊಲೀಸ್ ಅಧಿಕಾರಿಗಳು ಕಾರು ತರಿಸುವ ವ್ಯವಸ್ಥೆ ಮಾಡಿ, ಅಸ್ವಸ್ಥ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಳ್ಳುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದg
Àು