ಗೋ ಮಾಂಸ ನಿμÉೀಧ ಕಾಯ್ದೆ ವಿರುದ್ಧ ಅಪಸ್ವರ ಎತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮೊದಲು ಶಿಕ್ಷೆಯಾಗಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹೊಸಪೇಟೆಯಲ್ಲಿ ಬುಧವಾರ ಜನಸೇವಕ ಸಮಾವೇಶದಲ್ಲಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಸಿದ್ದರಾಮಯ್ಯ ಗೋ ನಿಷೇಧ ಕಾಯ್ದೆ ವಿರೋಧ ಮಾಡುವುದು ಬೇರೆ ವಿಚಾರ.ಗೋ ಮಾಂಸವನ್ನು ತಿನ್ನುತ್ತೇವೆ ಎಂದು ಹೇಳಿಕೆ ಕೊಡುವುದು ಬೇರೆ ವಿಚಾರ. ಗೋ ಹತ್ಯೆ ಮಾಡುವವರಿಗೆ ಅಲ್ಲ, ಮೊದಲು ತಿನ್ನುವವರಿಗೆ ಶಿಕ್ಷೆಯಾಗಬೇಕು. ಮೊದಲು ಸಿದ್ದರಾಮಯ್ಯಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಕಾಂಗ್ರೆಸ್‍ನದು ಸಂಕಲ್ಪ ಯಾತ್ರೆಯಲ್ಲ, ಅಂತಿಮ ಯಾತ್ರೆ. ಕಾಂಗ್ರೆಸ್ ಯಾವಾಗಲೂ ಕುಟುಂಬ ರಾಜಕೀಯವನ್ನೇ ಮಾಡಿಕೊಂಡು ಬಂದಿದೆ. ಗಾಂಧಿ ಕುಟುಂಬಕ್ಕೆ ಸೀಮಿತವಾಗಿದೆ ಎಂದು ಲೇವಡಿ ಮಾಡಿದರು.