Chikkodi

ಪ್ರಕಾಶ ಹುಕ್ಕೇರಿಯವರಿಗೆ ಬೆಳಗಾವಿ ಬೈ ಎಲೆಕ್ಷನ್ ಟಿಕೆಟ್ ವಿಚಾರ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದ ಗಣೇಶ ಹುಕ್ಕೇರಿ..

Share

ಬೆಳಗಾವಿ ಬೈ ಎಲೆಕ್ಷನ್ ಟಿಕೆಟ್ ವಿಚಾರವಾಗಿ ಪ್ರಕಾಶ ಹುಕ್ಕೇರಿಯವರ ಹೇಸರು ಸಹ ಹೈಕಮಾಂಡಿಗೆ ಹೋಗಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬಧ್ಧರಾಗಿರುತ್ತವೆ ಎಂದು ಶಾಸಕ ಗಣೇಶ ಹುಕ್ಕೇರಿ ಸ್ಪಷ್ಟಪಡಿಸಿದರು.

ಇಂದು ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಂಕಲಿ, ಜೋಡಕುರಳಿ ಗ್ರಾಮಗಳಲ್ಲಿ ರೈತ ಆತ್ಮಹತ್ಯೆ ಪರಿಹಾರ ಚೆಕ್ ವಿತರಣೆ ಹಾಗೂ ವಿವಿಧ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ. ನಂತರ ಇನ್ ನ್ಯೂಸ್ ಜೊತೆ ಮಾತನಾಡಿ ಶಾಸಕ ಗಣೇಶ ಹುಕ್ಕೇರಿಯವರು ಈಗಾಗಲೇ ರಾಜ್ಯದ ನಾಯಕರಾದಂತಹ ಸಿದ್ದರಾಮಯ್ಯನವರು, ಡಿ ಕೆ ಶಿವಕುಮಾರ, ಸತೀಶ ಜಾರಕಿಹೊಳಿ,ಎಂ ಬಿ ಪಾಟೀಲಯವರ ನೇತೃತ್ವದಲ್ಲಿ ಒಂದು ಹಂತದ ಸಭೆ ನಡೆದಿದ್ದು,ಅದರಲ್ಲಿ‌ ಮೂರು ಜನರ ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ.ಅದರಲ್ಲಿ ಚಿಕ್ಕೋಡಿಯ ಮಾಜಿ ಸಂಸದರಾದ ನಮ್ಮ ತಂದೆಯವರಾದ ಪ್ರಕಾಶ ಹುಕ್ಕೇರಿ ಹೆಸರು ಸಹ ಇದೆ.

ಹೈಕಮಾಂಡ್ ಬೆಳಗಾವಿ ಬೈ ಎಲೆಕ್ಷನ್ ಗೆ ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್ ನೀಡಿದರೆ ನಾವು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ.ಒಂದು ವೇಳೆ ಬೇರೆಯವರಿಗೆ ಟಿಕೆಟ್ ಕೊಟ್ಟ ರು ಕೂಡಾ ಪಕ್ಷದ ಅಭ್ಯರ್ಥಿಪರ ಕೆಲಸವನ್ನು ಮಾಡುತ್ತೆವೆ ಎಂದು ಶಾಸಕ ಗಣೇಶ ಹುಕ್ಕೇರಿ ಸ್ಪಷ್ಟಪಡಿಸಿದರು.ಈ ಸಂಧರ್ಭದಲ್ಲಿ ಬಸಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!