ಪಾಶ್ರ್ವವಾಯುಗೆ ತುತ್ತಾಗಿ ದೇಹದ ಸಮತೋಲನವನ್ನೇ ಕಳೆದುಕೊಂಡ ನೂರಾರು ರೋಗಿಗಳಿಗೆ ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯಿಂದಲೇ ಗುಣಮುಖರಾಗಿ ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ವೃದ್ಧನೊಬ್ಬ ಫೇಮಸ್ ಆಗುತ್ತಿದ್ದಾರೆ.
ಹೌದು, ಬೈಲಹೊಂಗಲ ತಾಲೂಕಿನ ಗರಜೂರ ಗ್ರಾಮದ ಈರಪ್ಪ ಗೋಣಿ ಎಂಬುವವರು ಪಾರ್ಶುವಾಯು ಸೇರಿದಂತೆ ಇತರ ಖಾಯಿಲೆಗಳಿಗೂ ಆಯುರ್ವೇದ ಔಷಧ ನೀಡುತ್ತಿದ್ದಾರೆ. ಈರಪ್ಪನವರು ಹುಟ್ಟ ಅನಕ್ಷಸ್ಥರು. ಇವರು ಯಾವತ್ತೂ ಶಾಲಾ ಕಾಲೇಜು ಮೆಟ್ಟಿಲು ನೋಡಿದವರೆ ಅಲ್ಲ. ಆದರೂ ವೈದ್ಯರು ನಾಚುವ ಹಾಗೇ ನರದೋಷಗಳಿಗೆ ತುತ್ತಾದ ಜನರನ್ನು ತಾವು ತಯಾರಿಸಿದ ಆಯುರ್ವೇಧ ಔಷಧದಿಂದಲೇ ಗುಣಮುಖರನ್ನಾಗಿ ಮಾಡುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಪೇಮಸ್ ಆಗಿದ್ದಾರೆ.
ಕೂಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿರುವ ಇವರಿಗೆ ಕಿತ್ತೂರು ಬಳಿಯ ಸ್ವಾಮೀಜಿಗಳೊಬ್ಬರು ಕಾಡಿನನಲ್ಲಿ ಕೆಲ ಮರ-ಗಿಡಗಳಿಂದ ತಯಾರಿಸುವ ಆಯುರ್ವೇದ ಔಷಧ ಹಾಗೂ ಕೆಲ ರೋಗಗಳಿಗೆ ಔಷಧ ಕೊಡುವ ಬಗ್ಗೆ ಹೇಳಿಕೊಟ್ಟಿದ್ದಾರಂತೆ. ಅದನ್ನೇ ಆ ಸ್ವಾಮೀಜಿ ಹೇಳಿಕೊಟ್ಟ ಆಯುರ್ವೇದ ಚಿಕಿತ್ಸೆ ಮುಂದುವರೆಸಿಕೊಂಡು ಹೋಗುತ್ತಿರುವ ಈರಪ್ಪ ಇದೀಗ ವೈದ್ಯ ಲೋಕವೇ ನಾಚುವ ಹಾಗೇ ಪಾಶ್ರ್ವವಾಯು ಹೊಡೆದ ರೋಗಿಗಳಿಗೆ ಆಯುರ್ವೇದ ಔಷಧ ನೀಡುವಲ್ಲಿ ಎತ್ತಿದ ಕೈ. ಕೆಲವೊಂದು ಸಾರಿ ವೈದ್ಯರ ಕೈಯಲ್ಲಿಯೂ ಆಗದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇವರ ಔಷಧಿ ಗುಣಮಟ್ಟವನ್ನ ಪರೀಕ್ಷಿಸಿದ ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ವತಿಯಿಂದ 2019 ನ.17ರಂದು ಅಜೀವ ಸದಸ್ಯತ್ವ ಪ್ರಮಾಣ ಪತ್ರವನ್ನ ನೀಡಿ ಗೌರವಿಸಿದ್ದಾರೆ.
ಪಾರ್ಶುವಾಯು ಎಂದ ಕೂಡಲೇ ರೋಗಿಗಳ ಮುಖಭಾಗ, ಕೈ, ಕಾಲು ಮಾತನಾಡಲು ಅಥವಾ ಮಾತನ್ನು ಅರ್ಥ ಮಾಡಿಕೊಳ್ಳಲು ಇವರಿಗೆ ಕಷ್ಟ. ಕೆಲವು ಸಲ ಮುಖದ ಸ್ನಾಯುಗಳು ದೌರ್ಬಲ್ಯದಿಂದಾಗಿ ಮಾತುಗಳು ತೊದಲುತಾರೆ. ಎರಡು ಕಣ್ಣುಗಳಿಂದ ನೋಡಲು ಸಾಧ್ಯವಾಗುವುದಿಲ್ಲ. ಪಾಶ್ರ್ವವಾಯ ಆದ್ಮೇಲೆ ದೇಹದ ಸಮತೋಲನವನ್ನೇ ಕಳೆದುಕೊಂಡಿರುತ್ತಾರೆ.ಈ ಕಾಯಿಲೆಗೆ ದೇಶ ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ಜನರು ಸಾವನ್ನಪ್ಪುತ್ತಾರೆ. ಇಂತಹ ಕಾಯಿಲೆಗೆ ಅಕ್ಷರ ಜ್ಣಾನವೇ ಗೊತ್ತಿಲ್ಲದ ಈತ ಕಾಡು ಗುಡ್ಡಗಳಲ್ಲಿ ಸಿಗುವ ಮರ, ಗಿಡ ಬೇರುಗಳನ್ನು ತಂದು ಅದನ್ನು ಕುಟ್ಟಿ ಪುಡಿ ಮಾಡಿ ತಯಾರಿಸಿ ಔಷಧಿಯನ್ನಾಗಿ ಮಾಡಿ ನೀಡುತ್ತಾರೆ.
ಇವರ ಔಷಧದಿಂದಲೇ ಸಾಕಷ್ಟು ಜನರು ಗುಣಮುಖರಾಗಿ ಇವರನ್ನ ಹರಸುತ್ತಿದ್ದಾರಂತೆ. ಬಳ್ಳಾರಿ, ಹಾಸನ, ಮೈಸೂರು, ಬೆಂಗಳೂರ, ಕೊಡಗು, ಪಕ್ಕದ ಜಿಲ್ಲೆಗಳಾದ ಧಾರವಾಡ ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದಲೂ ಈರಪ್ಪನವರ ಆಯುರ್ವೇದ ಔಷಧಿ ತೆಗೆದುಕೊಳ್ಳಲು ಜನರು ಆಗಮಿಸುತ್ತಾರೆ. ಡಾ.ರಾಜಕುಮಾರ ಅವರ ಪುತ್ರ ರಾಘವೇಂದ್ರ ರಾಜಕುಮಾರ ಕೂಡ ಇವರನ್ನು ಸಂಪರ್ಕ ಮಾಡಿ ಚಿಕಿತ್ಸೆ ನೀಡಲು ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು ಅನಿವಾರ್ಯ ಕಾರ್ಯಗಳಿಂದ ಹೋಗಲು ಸಾಧ್ಯವಾಗಲಿಲ್ಲ ಎಂದು ಈರಪ್ಪ ಹೇಳುತ್ತಿದ್ದಾರೆ.
ಆಯುರ್ವೇದ ಚಿಕಿತ್ಸಾ ವಿಧಾನ: ಈರಪ್ಪನವರು ಕಾಡಿನಲ್ಲಿನ ಗಿಡಮೂಲಿಕೆಗಳು ಹಾಗೂ ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಕೆಲವೊಂದಿಷ್ಟು ಪದಾರ್ಥಗಳನ್ನು ಸೇರಿಸಿ ತಯಾರಿಸಿಕೊಂಡಿರುವ ಎಣ್ಣೆಯಿಂದ ಯಾವ ವ್ಯಕ್ತಿಗೆ ಪಾಶ್ರ್ವವಾಯು, ಎಲ್ಲಿ ಆಗಿರುತ್ತದೆ ಆ ಸ್ಥಳದಲ್ಲಿ ಮೊದಲಿಗೆ ಮಸಾಜ ಮಾಡುತ್ತಾರೆ. ನಂತರ ತಾವೂ ಗಿಡಮೂಲಿಕೆಗಳಿಂದ ಮಾಡಿಟ್ಟುಕೊಂಡಿರುವ ಔಷಧಿಯ ಮಾತ್ರೆಗಳು, ಪುಡಿಯನ್ನು ಅವರಿಗೆ ನೀಡುತ್ತಾರೆ. ಇದೇ ರೀತಿ ಮರ್ನಾಲ್ಕು ಬಾರಿ ಮಾಡಿದ್ರೆ ಪಾಶ್ರ್ವವಾಯುಗೆ ತುತ್ತಾದ ವ್ಯಕ್ತಿ ಸುಧಾರಿಸಿಕೊಳ್ಳುತ್ತಾನೆ.
ಆಗ ಹೆಪ್ಪುಗಟ್ಟಿದ ರಕ್ತವೂ ನಿಧಾನವಾಗಿ ಕರಗಿ ವ್ಯಕ್ತಿ ಗುಣಮುಖರಾಗುತ್ತಾರೆ. ಇದರ ಜೊತೆಗೆ ಕಫ,ಪಿತ್ತ, ನರದೋಷ,ನಡನೋವು, ಮೊಣಕಾಲು ನೋವುಗಳಿಗೂ ಆರ್ಯುವೇದ ಮದ್ದು ನೀಡುತ್ತಾರೆ. ಔಷಧಿ ತರಲಿಕೆ ಹೋಗಿದ್ದ ಹಣ ಖರ್ಚುನ್ನು ಮಾತ್ರ ತೆಗೆದುಕೊಳ್ಳುತ್ತೇನೆ.ನನ್ನಿಂದ ಒಂದಿಷ್ಟು ಜನರಿಗೆ ಒಳ್ಳೆಯದು ಆದ್ರೆ ಸಾಕು ಎನ್ನುತ್ತಾರೆ ಈರಪ್ಪ ಗೋಣಿ.
ಆಸಕ್ತರು ಮೊ.8150899118ಗೆ ಸಂಪರ್ಕಿಸಬಹುದು.