ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಅದೆಷ್ಟೋ ಬಡ ಜೀವಗಳು ಈಗ ಹೊಟ್ಟೆ ಪಾಡಿಗಾಗಿ ಪಡದಾಡುವಂತಾಗಿದೆ. ಹಾಗೆಯೇ ಇಲ್ಲೊಬ್ಬಳು ಅಜ್ಜಿ ಇತ್ತ ಮನೆನು ಇಲ್ಲ, ಇತ್ತ ವ್ಯಾಪಾರ ಇಲ್ಲದೆ ಬೀದಿಗೆ ಇಳದಿದ್ದಾಳೆ.
ಹೌದು ಹೀಗೆ ಕಣ್ಣಿರು ಹಾಕುತ್ತು ತನ್ನ ನೋವವನ್ನು ತೋಡಿಕೊಳ್ಳುತ್ತಿರುವ ಈ ಅಜ್ಜಿಯ ಹೆಸರು ಸರೋಜಾ. ಇವಳು ಮೂಲತಃ ಜಗದೀಶ್ ನಗರದ ನಿವಾಸಿ. ಅಜ್ಜಿ ಸುಮಾರು 58 ವರ್ಷದಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಳು. ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಅಜ್ಜಿಯ ಹೊಟ್ಟೆಗೆ ಕಲ್ಲು ಹಾಕಿದ್ದಾರೆ. ದಾಖಲೆಗಳು ಇದ್ದರು ಕೂಡ ಪಾಲಿಕೆ ಅಧಿಕಾರಿಗಳು ಏಕಾಏಕಿ ಬಂದು ಅಜ್ಜಿಯ ವ್ಯಾಪಾರಕ್ಕೆ ಬ್ರೇಕ್ ಹಾಕಿ, ಈಗ ಸರೋಜಮ್ಮ ಹಸಿವಿನ ಅಂಚಿನಲ್ಲಿ ಇದ್ದಾಳೆ…. ಅಷ್ಟೇ ಅಲ್ಲದೆ ಜಗದೀಶ್ ನಗರದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ಹಾಕಿಸಿಕೊಡುವುದಾಗಿ ಹೇಳಿದ್ದ ಅಧಿಕಾರಿಗಳು, ಕಳೆದ 10 ವರ್ಷದಿಂದ ಇನ್ನುವರೆಗೂ ಯಾವುದೇ ಆಶ್ರಯ ಇಲ್ಲದೆ ಇತ್ತ ವ್ಯಾಪಾರ ಇಲ್ಲದೆ, ಅಜ್ಜಿ ಈಗ ಬೀದಿಗೆ ಬಿದ್ದಿದ್ದಾಳೆ. ವಸತಿ ಸಚಿವರಾದ ಇಲ್ಲಿನ ಜಗದೀಶ್ ನಗರದ ಬಡ ಜೀವಗಳಿಗೆ ಆದಷ್ಟು ಬೇಗ ಆಶ್ರಯ ಕಲ್ಪಸಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಇನ್ನುವರೆಗೂ ಯಾವುದೇ ಕಾರ್ಯ ನಡೆದಿಲ್ಲ.