ಪಾಟೀಲ ಗಲ್ಲಿ ಸರ್ಕಾರಿ ಶಾಲೆಯ ನೂತನ ಕೋಣೆಗಳ ಮತ್ತು ಶೌಚಾಲಯಗಳ ಲೋಕಾರ್ಪಣೆ ,
ಬೆಳಗಾವಿಯ ರೋಟರಿ ಕ್ಲಬ್ ಮತ್ತು ಶಾಸಕರ ಅನುದಾನದಡಿ ಪಾಟೀಲ ಗಲ್ಲಿಯಲ್ಲಿರುವ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಗೆ ನಿರ್ಮಿಸಿದ ನೂತನ ಕೊಠಡಿಗಳು ಮತ್ತು ಶೌಚಾಲಯಗಳ ಲೋಕಾರ್ಪಣೆ ಸಮಾರಂಭ ನಡೆಯಿತು.
ಶನಿವಾರದಂದು ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿರುವ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಸನ್ 2019-2020ನೇ ಸಾಲಿನ ಕೆಎಲ್‍ಎಲ್‍ಎಡಿಎಸ್ ಯೋಜನೆಯಡಿ ಸುಮಾರು 8 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಿರುವ ನೂತನ ಕೊಠಡಿ ಮತ್ತು ಶೌಚಾಲಯಗಳನ್ನು ಶಾಸಕ ಅನಿಲ್ ಬೆನಕೆ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕ ಅನಿಲ್ ಬೆನಕೆ ತಮ್ಮ ಮಾತೃಭಾಷೆಯಲ್ಲಿಯೇ ವಿದ್ಯಾರ್ಥಿಗಳು ವ್ಯಾಸಾಂಗ ಮಾಡಬೇಕು. ಮೊದಲು ಮಾತೃಭಾಷೆ ಕಲಿತರೆ ನಂತರ ಆಂಗ್ಲ ಭಾಷೆ ಕಲಿಯಲು ನಿಮಗೆ ಸರಳವಾಗುತ್ತದೆ. ಹೀಗಾಗಿ ಎಲ್ಲರೂ ತಮ್ಮ ಮಕ್ಕಳನ್ನು ಮಾತೃಭಾಷೆಯಲ್ಲಿಯೇ ಕಲಿಯಲು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ವೇದಿಕೆಯ ಮೇಲೆ ಪ್ರಕಾಶ ಮರಗಾಳೆ, ರೋಟೆರಿಯನ್ ಅಶೋಕ್ ಮಳಲಿ, ನಗರ ಬಿಇಓ ಭಜಂತ್ರಿ, ಶಂಕರ ಪಾಟೀಲ, ರಣಜೀತ್ ಚವ್ಹಾಣ ಪಾಟೀಲ, ಸತೀಶ ನಾಯಿಕ, ಪ್ರಭಾಕರ ಪಾಟೀಲ ಇನ್ನುಳಿದವರು ಆಸೀನರಾಗಿದ್ಧರು. ಶಾಲೆಯ ಮುಖ್ಯಶಿಕ್ಷಕಿ ಸಿಂಧೂ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಇನ್ನು ಹಲವು ಗಣ್ಯರು, ಶಿಕ್ಷಕರು ಉಪಸ್ಥಿತರಿದ್ದರು.