2020-25ನೇ ವರ್ಷಕ್ಕಾಗಿ ಕಾಗವಾಡ ತಾಲೂಕಾ ಮಟ್ಟದ ಶಿಕ್ಷಕರ ಸಂಘಟನೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸಂಚಾಲಕರ ಸನ್ಮಾನ ಸಮಾರಂಭ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ನೇತೃತ್ವದಲ್ಲಿ ನೆರವೇರಿತು.
ಕಾಗವಾಡ ಬಿಇಒ ಕಾರ್ಯಾಲಯದಲ್ಲಿ ಬಿಇಒ ಎಂ.ಆರ್.ಮುಂಜೆ ಅಧ್ಯಕ್ಷತೆಯಲ್ಲಿ ಶಿಕ್ಷಕರ ಸಂಘಟನೆಯ ನೂತನ ಸಂಚಾಲಕರು ಹಾಗೂ ಅಧ್ಯಕ್ಷರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ನೂತನ ಅಧ್ಯಕ್ಷರಾದ ಮಾರುತಿ ಸಂಕಪಾಳ, ಉಪಾಧ್ಯಕ್ಷ ಬಸಪ್ಪಾ ಹುವ್ವನ್ನವರ, ಮಹಿಳಾ ಉಪಾಧ್ಯಕ್ಷ ಇಂದುಮತಿ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಗಾಣಿಗೇರ, ಸಂಚಾಲಕರಾದ ಡಿ.ಜೆ.ಜಾಧವ, ಶ್ರೀಮತಿ ಆರ್.ಎಂ.ತೇವ್ರಟ್ಟಿ, ಎಂ.ಟಿ.ತಳವಾರ, ಗೌರವ ಅಧ್ಯಕ್ಷ ಎಸ್.ಬಿ.ಕೋಳೆಕರ, ಸಂಜೀವ ಕೋಳಿ, ಎ.ಡಿ.ಖಾತೆದಾರ, ಎಲ್.ವೈ.ಚೌಗಲಾ, ಎ.ಬಿ.ಕಾಮತ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಶಿಕ್ಷಣ ಸಂಯೋಜಕ ಆರ್.ಎಚ್.ಖಡಾಖಡಿ, ದಹಿಕ ಶಿಕ್ಷಣ ಸಂಯೋಜಕ ಸಿ.ಎಂ.ಸಾಂಗಲೆ, ಸಂಘಟನಾ ಪ್ರಮುಖರು ಸನ್ಮಾನಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಮಾತನಾಡಿ, ಕಾಗವಾಡ ಶೈಕ್ಷಣಿಕ ವಲಯ ಒಂದು ಉತ್ತಮ ವಲಯವಾಗುವತ್ತ ದಾಪುಗಾಲ ಹಾಕುತ್ತಿದೆ. ಶಿಕ್ಷಕರು ತಮ್ಮ ಮನಸಾರೆ ಬೋಧನೆ ಮಾಡುತ್ತಿದ್ದಾರೆ. ಶಿಕ್ಷಕ ಸಂಘಟನೆ ಸದಸ್ಯರು ಸಮಸ್ಯೆಗಳು ಗಮನಕ್ಕೆ ತಂದರೆ ಕೂಡಲೆ ಸ್ಪಂದಿಸುತ್ತೇನೆ. ಯಾವುದೇ ಶಿಕ್ಷಕರಿಗೆ ಅಡಚನೆಗಳು ಬಾರದಂತೆ ನಾನು ನೋಡಿಕೊಳ್ಳುತ್ತೇನೆ. ಎಲ್ಲರು ಒಂದಾಗಿ ಜಿಲ್ಲೆಯಲ್ಲಿ ಮಾದರಿ ಶಿಕ್ಷಣ ವಲಯ ಮಾಡೋಣ ಎಂದು ಹೇಳಿದರು.
ಕಾಗವಾಡ ತಾಲೂಕಾ ಶಿಕ್ಷಕರ ಸಂಘಟನೆಯ ನೂತನ ಅಧ್ಯಕ್ಷ ಮಾರುತಿ ಸಂಕಪಾಳ ಮಾತನಾಡಿ, ಶಿಕ್ಷಕ ಸಂಘಟನೆಯಲ್ಲಿ ಹಿರಿಯ ಶಿಕ್ಷಕರಿದ್ದು, ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಂಡು ಶಿಕ್ಷಕರ ಏಳಿಗೆಗಾಗಿ ನಾನು ಸ್ಪಂದಿಸುತ್ತೇನೆ. ಎಲ್ಲರು ಸಹಕರಿಸಿರಿ ಎಂದರು.
ರಾಜ್ಯ ನೌಕರರ ಸಂಘದ ಕಾಗವಾಡ ಘಟಕದ ಅಧ್ಯಕ್ಷ ಗೌಡಪ್ಪಾ ಸಡ್ಡಿ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ ರಚಿಸಿದ ಕಾಗವಾಡ ತಾಲೂಕಾ ಶಿಕ್ಷಕರ ಸಣ್ಣ ವಲಯವಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಆದತ್ಯ ನೀಡಬೇಕು. ನೌಕರರ ಸಂಘ ರಾಜ್ಯದಲ್ಲಿ ದೊಡ್ಡ ಸಂಘವಾಗಿದೆ. ನಾವು ನಿಮ್ಮ ಜೊತೆಗೆ ಇರುತ್ತೇವೆ. ಒಂದಾಗಿ ಕಾಗವಾಡ ವಲಯ, ಮಾದರಿ ವಲಯ ಮಾಡೋಣ ಎಂದರು.
ಸಂಘಟನೆ ಪದಾಧಿಕಾರಿಗಳೊಂದಿಗೆ ಎಂ.ಎಂ.ಕಲ್ಲೂರ, ಡಿ.ಕೆ.ಗುಪ್ತೆ, ಎಂ.ಎಂ.ಹವಳೆಗೋಳ, ಮಹೇಶ ಹುಲ್ಲೋಳಿ, ಸೇರಿದಂತೆ ಶಿಕ್ಷಕ, ಶಿಕ್ಷಿಕೆಯರು, ಬಿ.ಆರ್.ಸಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಎಸ್.ಬಿ.ಪಾಟೀಲ ಸ್ವಾಗತಿಸಿ ವಂದಿಸಿದರು.