ಮಣ್ಣಿನ ರಾಡಿ ಹದ ಮಾಡಲು ನೀರು ಸಂಗ್ರಹ ಮಾಡಿದ್ದ ಗುಂಡಿಯಲ್ಲಿ ಬಿದ್ದು 20 ತಿಂಗಳು ಮಗು ಸಾವನ್ನಪ್ಪಿರುವ ಧಾರುಣ ಘಟನೆ ಖಾನಾಪುರ ತಾಲೂಕಿನ ಕಸಬಾ ನಂದಗಡ ಗ್ರಾಮದಲ್ಲಿ ನಡೆದಿದೆ.
ಹೌದು ಕಸಬಾ ನಂದಗಡ ಗ್ರಾಮದ ದೀಪಕ ದಬಾಲೆ ಇವರ ಜಮೀನಿನಲ್ಲಿ ಇಟ್ಟಿಗೆ ತಯಾರು ಮಾಡುವ ಕೆಲಸಕ್ಕೆ ಕೇರವಾಡ ಗ್ರಾಮದ ರಮೇಶ್ ವಡ್ಡರ ಕುಟುಂಬ ಬಂದಿತ್ತು. ಅಲ್ಲಿಯೇ ಶೇಡ್‍ನಲ್ಲಿ ಈ ಕುಟುಂಬ ನೆಲೆಸಿತ್ತು. ಹೀಗೆ ಬೋರಿಗೆ ನೀರು ತರಲು ರಮೇಶ ವಡ್ಡರ ಹೋಗಿದ್ದ ಸಂದರ್ಭದಲ್ಲಿ ಶೇಡ್ ಹತ್ತಿರ ಇರುವ ರಾಡಿ ಹದ ಮಾಡಲು ನೀರು ಸಂಗ್ರಹ ಮಾಡಿದ ಗುಂಡಿಯಲ್ಲಿ ಆಟ ಆಡುತ್ತಾ ಹೋಗಿ ಬಿದ್ದು 20 ತಿಂಗಳ ಮಗು ಸೌಂದರ್ಯ ಸಾವನ್ನಪ್ಪಿದ್ದಾಳೆ. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಲಕರ ಬೇಜವಾಬ್ದಾರಿಯಿಂದ ಅಮಾಯಕ ಮಗುವೊಂದು ಸಾವನ್ನಪ್ಪಿದ್ದು ಮಾತ್ರ ದೊಡ್ಡ ದುರಂತವೇ ಸರಿ.