Hukkeri

ನೀರನ್ನು ಹಿತ ಮಿತವಾಗಿ ಬಳಸಿ-ಉಮೇಶ ಕತ್ತಿ

Share

ಹುಕ್ಕೇರಿ ನಗರದಲ್ಲಿ 5 ಲಕ್ಷ ಸಾಮಥ್ರ್ಯದ ಓವರ ಹೇಡ್ ಟ್ಯಾಂಕ ಉದ್ಘಾಟನೆ ಮಾಡಿದ ಹುಕ್ಕೇರಿ ಶಾಸಕ ಉಮೇಶ ಕತ್ತಿ ಸಾರ್ವಜನಿಕರು ನೀರನ್ನು ಮೀತವಾಗಿ ಬಳಸಬೇಕು ಎಂದರು.

: ಪಟ್ಟಣದ ಹುಕ್ಕೇರಿ ಗೋಕಾಕ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ನೀರು ಸರಬರಾಜು ಮತ್ತು ಒಳ ಚರಂಡಿ ಇಲಾಖೆ ವತಿಯಿಂದ ಸುಮಾರು 5 ಲಕ್ಷ ಸಾಮಥ್ರ್ಯದ ಓವರ ಹೇಡ್ ಟ್ಯಾಂಕ ಉದ್ಘಾಟನೆ ನೆರವೆರಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿ ಹುಕ್ಕೇರಿ ನಗರಕ್ಕೆ ಹಿಡಕಲ್ ಜಲಾಶಯದಿಂದ ನಿರಂತರ ನೀರು ಸರಬರಾಜು ಆಗುತ್ತಿದ್ದು, ಪಟ್ಟಣದಲ್ಲಿ 4884 ನಳಗಳ ಜೋಡನೆ ಮಾಡಲಾಗಿದೆ , ನೂತನ ಟ್ಯಾಂಕ್ ಮುಖಾಂತರ ಗಜಬರವಾಡಿ, ರಾಹುಲ ನಗರ ಹಾಗೂ ಬಾಲಕ, ಬಾಲಕಿಯರ ವಸತಿ ನಿಲಯ ಮತ್ತು ಅಗ್ನಿಶಾಮಕ ಠಾಣೆಗೆ ಪಾಯಿಪ್ ಲಾಯಿನ್ ಅಳವಡಿಸಿ ನೀರು ಸರಬರಾಜು ಮಾಡಲಾಗುವದು ನಾಗರಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ನೀರನ್ನು ಮಿತವಾಗಿ ಬಳಸಬೇಕು ಎಂದರು.

ನಂತರ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿ ಗಳನ್ನು ಗುತ್ತಿಗೆದಾರ ಅಶೋಕ ಪಾಟೀಲ ಮತ್ತು ಪುರಸಭೆ ಅಭಿಯಂತರ ಗೌರಿಶಂಕರ ಮಹಾಳಂಕ ಸತ್ಕರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಅಣ್ಣಾಗೌಡಾ ಪಾಟೀಲ, ಉಪಾದ್ಯಕ್ಷ ಆನಂದ ಗಂಧ, ನೀರು ಸರಬರಾಜು ಇಲಾಖೆ ಅಧಿಕಾರಿಗಳಾದ ಅಶೋಕ ಶಿರೂರ, ಸುರೇಶ ನಾಗಮೋತಿ, ಪುರಸಭೆ ಸದಸ್ಯರಾದ ಫರಿದಾ ಮುಲ್ಲಾ, ಸದಾ ಕರೆಪ್ಪಗೋಳ, ಸುರೇಖಾ ಗಳತಗಿಮಠ, ಚಂದು ಮುತ್ನಾಳೆ, ಭಿಮಶಿ ಗೋರಖನಾಥ, ಗಣ್ಯ ವ್ಯಾಪಾರಸ್ಥ ಚನ್ನಪ್ಪಾ ಗಜಬರ, ನೀಲಪ್ಪಾ ಕೋಲಿ ಮೊದಲಾದವರು ಹಾಜರಿದ್ದರು.

Tags:

error: Content is protected !!