ತಾವೇ ಮಾಡಿದ ನಿಯಮಗಳನ್ನು ಗಾಳಿಗೆ ತೂರುವಲ್ಲಿ ಬಿಜೆಪಿ ನಾಯಕರು ನಂಬರ್ ಒನ್ ಇದ್ದಾರೆ. ಅಮಿತ್ ಷಾ ಕಾರ್ಯಕ್ರಮಕ್ಕೆ ಅವಕಾಶ ಕೊಡುವುದಾದ್ರೆ ಕೋವಿಡ್ ನಿಯಮಗಳನ್ನು ವಾಪಸ್ಸು ಪಡೆದುಕೊಂಡು ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೂ ಅವಕಾಶ ಕೊಡಿ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಬೆಳಗಾವಿಯ ಅಮಿತ್ ಷಾ ಕಾರ್ಯಕ್ರಮಕ್ಕೆ ಕೋವಿಡ್ ನಿಯಮ ಉಲ್ಲಂಘನೆ ಆಗುವುದಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ನಿಯಮಗಳನ್ನು ಉಲ್ಲಂಘನೆ ಮಾಡಲು ಬಿಜೆಪಿ ಅವರು ನಂ.1. ಅವರೇ ಮಾಡಿರುವ ನಿಯಮಗಳನ್ನು ಸಾಕಷ್ಟು ಬಾರಿ ಗಾಳಿಗೆ ತೂರಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿಯೂ ವಿರೋಧವಾಗಿದ್ದು. ನಾವು ಕೂಡ ಕೋವಿಡ್ ನಿಯಮಗಳನ್ನು ಹಿಂದಕ್ಕೆ ಪಡೆದು, ಯಲ್ಲಮ್ಮದೇವಿ ಜಾತ್ರೆಗೂ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದೇವೆ. ಇನ್ನು ಜಿಲ್ಲಾ ಕ್ರೀಂಡಾಗಣದ ಸಾಮಥ್ರ್ಯವೇ 50ರಿಂದ 60 ಸಾವಿರ ಜನರನ್ನು ಸೇರಿಸಬಹುದು. ಆದ್ರೆ 4-5 ಲಕ್ಷ ಜನರನ್ನು ಕೂಡಿಸುವ ಪ್ರಶ್ನೆಯೇ ಇಲ್ಲ ಎಂದರು.
ಕಾಂಗ್ರೆಸ್ನವರ ಬಳಿ ನಿಜವಾಗಲೂ ಸಿಡಿ ಇದ್ದರೆ ಬಹಿರಂಗ ಪಡಿಸಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪಕ್ಕೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ನಮಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ. ಈಗಾಗಲೇ ಸಿಡಿ ಇದ್ದವರೂ ಮಂತ್ರಿ ಆಗಿ ಬಿಟ್ಟಿದ್ದಾರೆ. ದುಡ್ಡು ಇದ್ದವರು ಮಂತ್ರಿ ಆಗಿದ್ದಾರೆ ಎಂದು ಯತ್ನಾಳ್ ಅವರೇ ಆರೋಪಿಸಿದ್ದಾರೆ. ಯಾರದೇ ಕಡೆ ಸಿಡಿ ಇದ್ದರೂ ರಿಲೀಸ್ ಮಾಡಬೇಕು. ತನಿಖೆ ಮಾಡುವಂತೆ ಸಿಎಂಗೆ ಸಿಡಿ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಯಾರು ಆರೋಪ ಮಾಡಿದ್ದಾರೋ ಅವರೇ ಸಿಡಿಯನ್ನು ರಿಲೀಸ್ ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡುವುದು. ಡೌಟ್ ಎಂದರು. ನೋಡಲಾರದ ಸಿಡಿಗಳೇ ಜಾಸ್ತಿ ಇರುತ್ತೇವೆ. ನಾಳೆ 12 ಗಂಟೆಗೆ ನೋಡಿ ಎಂದು ಟ್ರಯಲ್ ಬಿಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತವಾಗಿರಬಹುದು. ಆದ್ರೆ ಮತ್ತೆ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಬಗ್ಗೆ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾರು ಆಸಕ್ತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ನೋಡುತ್ತೇವೆ. ಇನ್ನು ಚುನಾವಣೆ 3 ತಿಂಗಳು ಆ ಕಡೆಯಿಂದ ಈಕಡೆ ಈ ಕಡೆಯಿಂದ ಆ ಕಡೆ ಪಕ್ಷಾಂತರ ಪರ್ವ ಆರಂಭವಾಗುತ್ತದೆ ಎಂದು ಹೇಳಿದರು.
ಬೆಳಗಾವಿ ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಮಾತನಾಡಿದ ಸತೀಶ ಜಾರಕಿಹೊಳಿ ಮುಂದಿನ ತಿಂಗಳು 30ರೊಳಗೆ ಬೆಳಗಾವಿ ಲೋಕಸಭೆ ಚುನಾವಣೆ ಮುಗಿಯಬೇಕು. ಅಮಿತ್ ಷಾ ಬಂದು ಹೋದ ನಂತರ ಜ.20ರಂದು ಬಿಜೆಪಿ ಅವರು ಕ್ಯಾಂಡಿಡೇಟ್ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನು ನಾಮ್ಮ ಅಭ್ಯರ್ಥಿ ಆಯ್ಕೆ ಫೈನಲ್ ಇನ್ನೂ ಆಗಿಲ್ಲ. ಚರ್ಚೆಯ ಹಂತದಲ್ಲಿದ್ದೇವೆ. ನಾವು ಕಳಿಸುವ ಒಂದು ಹೆಸರನ್ನು ಹೈಕಮಾಂಡ್ ಫೈನಲ್ ಮಾಡುತ್ತೆ ಎಂದು ಹೇಳಿದರು. ಇದೇ ವೇಳೆ 2023ಕ್ಕೆ ನಾವು ಸಿಎಂ ರೇಸ್ನಲ್ಲಿ ಇಲ್ಲವೇ ಇಲ್ಲ. ಇದಾದ ಬಳಿಕ ಮುಂದೆ ನಾವು ಸಿಎಂ ರೇಸ್ನಲ್ಲಿ ಇರುತ್ತೇವೆ ಎಂದು ತಮ್ಮ ಸಿಎಂ ಇಂಗಿತವನ್ನು ಸತೀಶ ಜಾರಕಿಹೊಳಿ ವ್ಯಕ್ತಪಡಿಸಿದರು.
ಒಟ್ಟಾರೆ ಬಿಜೆಪಿ ಅವರು ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ನಿಸ್ಸಿಮರು. ದೇಶ, ರಾಜ್ಯ ಅಷ್ಟೇ ಅಲ್ಲ ಜಿಲ್ಲೆಯಲ್ಲಿಯೂ ನಿಯಮಗಳನ್ನು ಉಲ್ಲಂಘಿಸುತ್ತಾರೆ ಎಂದು ಸತೀಶ ಜಾರಕಿಹೊಳಿ ಕಿಡಿಕಾರಿದರು.