ನಿಪ್ಪಾಣಿ ನಗರದ ಪಾರ್ವತಿ ಕಾರ್ನರ ಬಳಿ ಇರುವ ಸರ್ಕಲ್‍ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸರ್ಕಲ್ ನಾಮಕರಣ ಮಾಡಿ ಮೂರ್ತಿ ನಿರ್ಮಿಸಲು ಸಿದ್ಧತೆ ನಡೆದಿವೆ ಎಂದು ನಿಪ್ಪಾಣಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಪೀಲ ಕಮತೆ ತಿಳಿಸಿದರು.
ಹೌದು. ಕೇವಲ ರಾಜಕೀಯ ಹಿತಾಸಕ್ತಿಯಿಂದ ಕಳೆದ 28 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಸಂಗೊಳ್ಳಿ ರಾಯಣ್ಣನ ವೃತ್ತ ನಿರ್ಮಿಸಲು ಕರವೇ ಮುಂದಾಗಿದೆ
20/07/1993 ರಂದು ನಿಪ್ಪಾಣಿ ನಗರಸಭೆಯಲ್ಲಿ ನಡೆದ ನಗರಸಭೆಯ ವಿಷಯ ಸಂಖ್ಯೆ 18 ಪ್ರಸ್ತಾವನೆಯ ಪ್ರಕಾರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರವರಿಗೆ ಕೇಂದ್ರ ಬಸ್ ನಿಲ್ದಾಣದ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣನ ವೃತ್ತ ಎಂದು ನಾಮಕರಣ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. 27/07/1993 ರಂದು ನಗರಸಭೆಯಲ್ಲಿ ಸರ್ವಾ ನುಮತ ದಿಂದ ಠರಾವು ಸಂಖ್ಯೆ 332 ಅನ್ನು ಅನುಮೋದಿಸಲಾಯಿತು.
ಅದರಂತೆ ಕೇಂದ್ರ ಬಸ್ ನಿಲ್ದಾಣದ ವೃತ್ತಕ್ಕೆ ಧರ್ಮವೀರ ಸಂಭಾಜಿ ರಾಜೇ ವೃತ್ತ ಹಾಗೂ ಪಾರ್ವತಿ ಕಾರ್ನರ ಬಳಿ ಇರುವ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣನ ವೃತ್ತ ಎಂದು ನಾಮಕರಣ ಮಾಡಲು ಅನುಮೋದನೆ ನೀಡಿದೆ. ಆದರೆ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಎಂದು ತಿಳಿಸಿದ್ದಾರೆ. ಈ ವಿಷಯ ಕ್ಕೆ ಸಂಬಂಧಿಸಿದಂತೆ ಈ ಸರ್ಕಲ್ ಗೆ ಮರುನಾಮಕರಣ ಮಾಡುವಂತೆ ನಗರಸಭೆಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದ್ರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಯುವ ಘಟಕದ ಅಧ್ಯಕ್ಷ ಅವಿನಾಶ್ ಟೊಂಗರೆ,ಜಯವಂತ ಪಾಟೀಲ, ಆನಂದ ಇಳಿಗೇರ,ಸೂರಜ ಶಿಂಧೆ, ಸೂರಜ ಗಾಡಿವಡ್ಡರ ಇದ್ದರು.