ನಿಪ್ಪಾಣಿ ಪಟ್ಟಣದ ಮುರಗೋಡ ರಸ್ತೆ ಯಲ್ಲಿನ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಅಂತರರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಮಿರಜ ನಗರದ 23 ವರ್ಷದ ವಿಜಯ ರಾಜು ಮಸ್ಕೆ ಬಂಧಿತ ಆರೋಪಿಯಾಗಿದ್ದು. ಬಂಧಿತ ಆರೋಪಿ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಹಿಡಲಗಾ ಕೇಂದ್ರ ಕಾರಾಗ್ರಹಕ್ಕೆ ಒಪ್ಪಿಸಲಾಗಿದೆ.
ಸಿಪಿಐ ಸಂತೋಷ ಸತ್ಯನಾಯಕ ನೇತೃತ್ವದಲ್ಲಿ ಪಿಎಸ್‍ಐ ಅನಿಲ ಕುಂಬಾರ, ಉದಯ ಕಾಂಬಳೆ, ಪೋಪಟ್ ಐನಾಪುರೆ ಹಾಗೂ ಸಿಬ್ಬಂದಿ ಈ ದಾಳಿಯಲ್ಲಿ ಭಾಗಿಯಾಗಿದ್ದರು.