Medical

ನಿಪ್ಪಾಣಿಗೆ ಒಂದು ವರ್ಷದಲ್ಲಿ ತಾಲೂಕು ಆಸ್ಪತ್ರೆ ಮಂಜೂರು: ಸಚಿವ ಡಾ.ಕೆ.ಸುಧಾಕರ್ ಭರವಸೆ

Share

ನಿಪ್ಪಾಣಿ ನಗರದ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಹಾಗೂ ವಸತಿ ಗೃಹಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.

ನಿಪ್ಪಾಣಿ ನಗರದ ಜನರ ಅನುಕೂಲಕ್ಕಾಗಿ ಸುಮಾರು 8 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಚಿವ ಕೆ ಸುಧಾಕರ ಸೋಮವಾರ ಉದ್ಘಾಟಿಸಿದರು. ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಸಾಥ್ ನೀಡಿದರು.
ನಂತರ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಜನರ ಆರೋಗ್ಯದ ಹಿತದೃಷ್ಟಿಯಿಂದ ನಿಪ್ಪಾಣಿ ಒಂದು ತಾಲೂಕಾ ಆಸ್ಪತ್ರೆಗೆ ಮುಂಜೂರು ಮಾಡಬೇಕೆಂದು ಆರೋಗ್ಯ ಸಚಿವ !ಡಾ ಕೆ ಸುಧಾಕರ ರಲ್ಲಿ ಮನವಿಯನ್ನು ಮಾಡಿಕೊಂಡರು…

ನಂತರ ಸಚಿವ ಕೆ ಸುಧಾಕರ ಮಾತನಾಡಿ ಒಂದು ವರ್ಷದ ಒಳಗಾಗಿ ನಿಪ್ಪಾಣಿಗೆ ತಾಲೂಕಾ ಆಸ್ಪತ್ರೆ ಯನ್ನು ಮಂಜೂರು ಮಾಡಲಾಗುವುದು. ಶೀಘ್ರವೇ ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಒಟ್ಟಿನಲ್ಲಿ ಹೊಸ ತಾಲೂಕು ಕೇಂದ್ರವಾಗಿ ಒಂದೇ ವರ್ಷದಲ್ಲಿ ನಿಪ್ಪಾಣಿಗೆ ಸುಸಜ್ಜಿತ ತಾಲೂಕು ಆಸ್ಪತ್ರೆ ಮಂಜೂರು ಭರವಸೆ ದೊರಕಿರುವುದು ಜನತೆಯಲ್ಲಿ ವಿಶ್ವಾಸ ಮೂಡಿಸಿದೆ.

Tags:

error: Content is protected !!