hubbali

ನಾವು ಈಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು.? ಡಿಕೆಶಿಗೆ ಸುಧಾಕರ್ ತಿರುಗೇಟು…!

Share

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರು ಘರ್ ವಾಪಸ್ಸಿ ಅಗಲಿದ್ದಾರೆ ಎಂಬ ಡಿ ಕೆ ಶಿವಕುಮಾರ ಹೇಳಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಕಿಮ್ಸ್ ವೈದ್ಯರು- ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವು ಈಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು.? ಅದು ನಿಷ್ಕ್ರಿಯವಾಗಿರುವ ರಾಜಕಾರಣಿಗಳು ಕಾಂಗ್ರೆಸ್ ಸೇರ್ಪಡೆ ಆಗಬಹುದು. ಆದ್ರೇ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ವಾಪಸ್ ಹೋಗುವುದಿಲ್ಲ ಎಂದು ತಿರುಗೇಟು ನೀಡಿದರು.

ಕೋ ವ್ಯಾಕ್ಸಿನ್ ಸಾಕಷ್ಟು ಕ್ಲಿನಿಕಲ್ ಟ್ರೈಲ್ ಆದ ಬಳಿಕವೇ ವ್ಯಾಕ್ಸಿನೇಷನ್‌ ಗೆ ಅವಕಾಶ ನೀಡಲಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು‌-ಜನರ ಮೇಲೆ ಕ್ಲಿನಿಕಲ್ ಟ್ರೈಲ್ ನಡೆಸಿರುವ ಮಾಹಿತಿ ಇದೆ. ನನ್ನ ಮಾಹಿತಿ ಪ್ರಕಾರ ಮೂರನೇ ಹಂತದ ಕ್ಲಿನಿಕಲ್ ಟ್ರೈಲ್ ಆಗಿದೆ. ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತವಾದ ಲಸಿಕೆ, ಯಾವುದೇ ಆತಂಕ‌ ಬೇಡ.
ಕೋವಿಶಿಲ್ಡ್ ಅಥವಾ ಕೊವ್ಯಾಕ್ಸಿನ್ ಯಾವುದನ್ನು ಬೇಕಾದ್ರು ತೆಗದುಕೊಳ್ಳಬಹುದು. ಇಂತಹದೇ ತೆಗೆದುಕೊಳ್ಳಬೇಕು ಎಂಬ ಯಾವುದೇ ಒತ್ತಡ ಇಲ್ಲ.
ಕೊ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಯಾರಿಗೂ ಬಲವಂತ ಮಾಡುತ್ತಿಲ್ಲ. ಕೊವ್ಯಾಕ್ಸಿನ್ ಬೇಡ ಅನ್ನೊರು ತೆಗೆದುಕೊಳ್ಳುವುದು ಬೇಡ ಎಂದರು.

Tags:

error: Content is protected !!