Belagavi

ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಕೊರೊನಾ ವ್ಯಾಕ್ಸಿನ್ ಡ್ರೈರನ್

Share

ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಕೊರೊನಾ ಲಸಿಕೆ ಡ್ರೈರನ್ ನಡೆಯಲಿದೆ.

ಜಿಲ್ಲೆಯ 2 ಮೆಡಿಕಲ್ ಕಾಲೇಜು, ಒಂದು ಖಾಸಗಿ ಆಸ್ಪತ್ರೆ, ಒಂದು ಪಿಹೆಚ್‍ಸಿ, ಒಂದು ಯುಪಿಹೆಚ್‍ಸಿ, ಒಂದು ಸಿಹೆಚ್‍ಸಿ, ಒಂದು ತಾಲೂಕು ಆಸ್ಪತ್ರೆಯಲ್ಲಿ ಡ್ರೈರನ್ ನಾಳೆ ನಡೆಯಲಿದೆ. ಬೆಳಗಾವಿ ನಗರದ ಕೆಎಲ್‍ಇ ಸಂಸ್ಥೆಯ ಜೆಎನ್‍ಎಮ್‍ಸಿ ಮೆಡಿಕಲ್ ಕಾಲೇಜು, ಬಿಮ್ಸ ಮೆಡಿಕಲ್ ಕಾಲೇಜು, ಗೋವಾ ವೇಸ್ ಬಳಿಯ ಲೇಕ್ ವ್ಯೂ ಆಸ್ಪತ್ರೆ, ನಿಪ್ಪಾಣಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಯಕ್ಸಂಬಾದ ಸಮುದಾಯ ಆರೋಗ್ಯ ಕೇಂದ್ರ, ಅಥಣಿ ತಾಲೂಕು ಆಸ್ಪತ್ರೆ, ಗೋಕಾಕ್ ತಾಲೂಕಿನ ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯಲಿದೆ.

ಮೊದಲ ಹಂತದಲ್ಲಿ ಬೆಳಗಾವಿ ಜಿಲ್ಲೆಯ 30 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲು ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು. ನಾಳೆಯ ಡ್ರೈರನ್‍ಗೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.

 

Tags:

error: Content is protected !!