ಖಾನಾಪುರ ತಾಲೂಕಿನ ಥಿಯೋಲಿ ಕ್ರಿಶ್ಚಿಯನ್‍ವಾಡಾದಿಂದ ಭಾನುವಾರ ಕಾಣೆಯಾಗಿದ್ದ ಯುವಕನ ಶವ ಥಿಯೋಲಿ ಹೊರವಲಯದ ಹುಲ್ಲು ಹಾಸಿನಲ್ಲಿ ಸೋಮವಾರ ಪತ್ತೆಯಾಗಿದೆ.
ಮೃತ ಯುವಕನನ್ನು ಖಾನಾಪುರ ತಾಲೂಕು ಥಿಯೋಲಿ ಕ್ರಿಶ್ಚಿಯನ್‍ವಾಡಾದ 27 ವರ್ಷದ ಯುವಕ ಇಶಾಂತಿ ಬಸ್ತೀವ್ ಪೀರಾ ಎಂದು ಗುರುತಿಸಲಾಗಿದೆ. ಈತನ ಸಾವಿಗೆ ಕಾರಣ ಏನೆಂಬುದು ನಿಗೂಢವಾಗಿದೆ.
ಇನ್ನು ಇಶಾಂತಿ ಬಸ್ತೀವ್ ಪೀರಾ ಗ್ರಾಮದ ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದ. ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಆತ ಗ್ರಾಮದ ಉತ್ಸಾಹಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದ ಎಂಬ ಮಾಹಿತಿ ದೊರಕಿದೆ.
ಯುವಕನ ಶವ ಗ್ರಾಮದ ಹೊರವಲಯದಲ್ಲಿ ದೊರಕಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಿಎಸ್‍ಐ ಬಸಗೌಡ ಪಾಟೀಲ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಕೆಲವ ಸುಳಿವುಗಳನ್ನು ಆಧರಿಸಿ, ವಿಚಾರಣೆ ನಂತರ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.