Uncategorized

ನಾನು ಮನಸ್ಸು ಮಾಡಿದರೆ ಕಾಂಗ್ರೆಸ್ಸಿನವರು ಬಿಜೆಪಿಗೆ ಬರುತ್ತಾರೆ: ಸಚಿವ ರಮೇಶ ಜಾರಕಿಹೊಳಿ

Share

ಗೋಕಾಕ ತಾಲೂಕಿನ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಗೃಹ ಕಚೇರಿಯ ಆವರಣದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸಚಿವ ರಮೇಶ ಜಾರಕಿಹೊಳಿ ಮಾತನಾಡಿ,ಗೆದ್ದವರು, ಸೋತವರು ಎಲ್ಲರೂ ನಮ್ಮವರೇ, ನಿಮ್ಮ ಆಶಿರ್ವಾದದಿಂದ ನಾನು ಈ ಮಟ್ಟದಲ್ಲಿ ಬೆಳೆದಿದ್ದೇನೆ ಎಂದರು.
ವೈ.ಓ: ಗೋಕಾಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಸದಸ್ಯರಿಂದ ಸತ್ಕಾರ ಸ್ವೀಕರಿಸಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಸತತ ನಾಲ್ಕು ಬಾರಿ ಗೋಕಾಕ ಮತಕ್ಷೇತ್ರದ ಜನತೆ ಜಾರಕಿಹೊಳಿ ಕುಟುಂಬದ ಜೊತೆ ಇದ್ದೀರಿ. ನಿಮ್ಮ ಆಶಿರ್ವಾದದಿಂದ ನಾನು ಈ ಮಟ್ಟದಲ್ಲಿ ಬೆಳೆದಿದ್ದೇನೆ ಎಂದರು.

ಇನ್ನೂ ಕೆಲವರು ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ ಬರ್ಜರಿ ಗೆಲುವೆಂದು ಬೀಗುತಿದ್ದಾರೆ, ಅದಕ್ಕೆ ನಾನು ಮನಸ್ಸು ಮಾಡಿದರೆ ೨೪ ತಾಸಿನಲ್ಲಿ ಕಾಂಗ್ರೇಸ್ಸಿನವರು ಬಿಜೆಪಿಗೆ ಬರುತ್ತಾರೆ. ಅದಲ್ಲದೆ ಬರುವ ಬೆಳಗಾವಿ ಲೊಕಸಭಾ ಉಪಚುನಾವಣೆಯಲ್ಲಿ ಅಂಗಡಿ ಕುಟುಂಬದವರಿಗೆ ಬಿಜೆಪಿ ಟಿಕೇಟ ನೀಡಿದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೂ ಹೈಕಮಾಂಡ ನಿರ್ಣಯವೆ ಅಂತಿಮ ಎಂದರು.
ಇನ್ನು ನಾನು ಪ್ರದಾನ ಮಂತ್ರಿ ಮೋದಿ, ಅಮೀತ ಷಾ ಹಾಗೂ ಯಡಿಯೂರಪ್ಪನವರ ಗಟ್ಟಿತನ ನೋಡಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದೇನೆ, ಬಿಜೆಪಿಗೆ ಹೋಗಿದ್ದಕ್ಕೆ ಕೆಲ ಕಾಂಗ್ರೆಸ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಸಚಿವರು ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಶಾಸಕ ಎಂ,ಎಲ್,ಮುತ್ತೆಣ್ಣವರ, ಬಸವರಾಜ ಹಿರೇಮಠ, ನಗರ ಘಟಕದ ಅಧ್ಯಕ್ಷ ಭೀಮಶಿ ಬರಮನ್ನವರ ಹಾಗೂ ಇನ್ನುಳಿದ ಮುಖಂಡರು ಮತ್ತು ಸಾವಿರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!