ನಾನು ಬಾಂಬೆ ಟೀಂನ ಕ್ಯಾಪ್ಟನ್ ಅಲ್ಲ. ನಾನು ಅದರಲ್ಲಿ 17ನೇ ಸ್ಥಾನದಲ್ಲಿ ಇದ್ದೇನೆ. ರಮೇಶ ಜಾರಕಿಹೊಳಿ ವ್ಯಕ್ತಿತ್ವ ಏನು ಅಂತಾ ಇಡೀ ರಾಜ್ಯಕ್ಕೆ ಗೊತ್ತಿದೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಹೌದು ತಾವು ಸಚಿವರಾದ ಬಳಿಕ ರಮೇಶ ಜಾರಕಿಹೊಳಿ ಮಿತ್ರಮಂಡಳಿ ಬಗ್ಗೆ ಸಿರಿಯಸ್ಸಾಗಿ ಯೋಚನೆ ಮಾಡುತ್ತಿಲ್ಲ ಎಂದ ಆರೋಪದ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ ಜಾರಕಿಹೊಳಿ ಮಿತ್ರಮಂಡಳಿ ಬಗ್ಗೆ ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ. ಹಾದಿ ಬೀದಿಯಲ್ಲಿ ಮಾತನಾಡೋದಿಕ್ಕೆ ಆಗುತ್ತಾ..? ಈ ಸಂಬಂಧ ಸಿಎಂ ಹಾಗೂ ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ರಮೇಶ ಜಾರಕಿಹೊಳಿ ನಾಗೇಶ್ ಡ್ರಾಪ್ ಆಗುತ್ತಾರೆ ಎಂದು ನನಗೆ ಕಲ್ಪನೇ ಇರಲಿಲ್ಲ. ಅದೇ ರೀತಿ ಮುನಿರತ್ನ ಅವರಿಗೆ ಕ್ಯಾಬಿನೇಟ್‍ಗೆ ಸೇರಿಸೋದಿಲ್ಲ ಎಂದು ಕೂಡ ನಾನು ಅಂದುಕೊಂಡಿರಲಿಲ್ಲ. ಈ ಬಗ್ಗೆ ಎಲ್ಲಿ ಮಾತನಾಡಬೇಕು, ಅಲ್ಲಿ ನಾನು ಮಾತನಾಡುತ್ತೇನೆ ಎಂದು ಹೇಳಿದರು. ಮುನಿರತ್ನ, ಮಹೇಶ ಕುಮಟಳ್ಳಿ ಆಗಬೇಕು ಇನ್ನು ಬಹಳಷ್ಟು ಜನರಿಗೆ ಮಂತ್ರಿ ಸ್ಥಾನ ಸಿಗಬೇಕಿದೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ ಕುರಿತು ಮಾತನಾಡಿದ ರಮೇಶ ಜಾರಕಿಹೊಳಿ ಯತ್ನಾಳ್ ಬಹಳ ಹಿರಿಯರು, ಅವರು ಮಂತ್ರಿ ಆಗಬೇಕು ಎನ್ನುವುದು ನನ್ನ ಆಸೆಯೂ ಆಗಿದೆ. ಯತ್ನಾಳ್ ಉತ್ತರಕರ್ನಾಟಕದ ಪ್ರಭಾವಿ ನಾಯಕರು ಅವರಿಂದ ಪಕ್ಷಕ್ಕೆ ಒಳ್ಳೆಯದು ಆಗಲಿದೆ. ಮುಂದಿನ ದಿನಗಳಲ್ಲಿ ಯತ್ನಾಳ ಅವರಿಗೆ ಒಳ್ಳೆಯದು ಆಗಲಿದೆ ಎಂದರು.
ಬೆಳಗಾವಿಯಲ್ಲಿ ಅಮಿತ್ ಷಾ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ವಿರೋಧ ಸಂಬಂಧ ಮಾತನಾಡಿದ ರಮೇಶ ಜಾರಕಿಹೊಳಿ ಆರೋಗ್ಯ ಇಲಾಖೆ, ರಾಜ್ಯ ಸರ್ಕಾರದ ಮಾರ್ಗಸೂಚಿ ಅನುಸಾರ ಕಾರ್ಯಕ್ರಮ ಮಾಡುತ್ತೇವೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲನೆ ಮಾಡಿಕೊಂಡು ಕಾರ್ಯಕ್ರಮ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸೋತವರಿಗೆ ಮಂತ್ರಿ ಸ್ಥಾನ ಕೊಡುವ ವಿಚಾರಕ್ಕೆ ಕೆಲವರು ಅಮಿತ್ ಷಾಗೆ ದೂರು ನೀಡುವ ವಿಚಾರಕ್ಕೆ ಪ್ರತಿಕ್ರಯಿಸಿದ ರಮೇಶ ಜಾರಕಿಹೊಳಿ ಸರ್ಕಾರ ರಚನೆಯಲ್ಲಿ ಯೋಗೇಶ್ವರ ಪಾತ್ರ ಸಾಕಷ್ಟಿದೆ. ಸೋತವರಿಗೆ ಕೊಡ್ತಾರೆ ಬಿಡ್ತಾರೆ ಗೊತ್ತಿಲ್ಲ. ಯೋಗೇಶ್ವರ್‍ಗೆ ಅಂದು ನಮ್ಮನ್ನ ಒಗ್ಗೂಡಿಸುವುದು ಯಾಕೆ ಬೇಕಿತ್ತು. ಕಷ್ಟಪಟ್ಟು ಹೆಲ್ತ್ ಹಾಳು ಮಾಡಿಕೊಂಡು, ಸಾಲ ಮಾಡಿಕೊಂಡು ಮಾಡುವುದು ಯಾಕೆ ಬೇಕಿತ್ತು. ತಮ್ಮ ಮನೆಯ ಮೇಲೆ ಒಂಬತ್ತು ಕೋಟಿ ಸಾಲ ಮಾಡಿಕೊಂಡರು ಎಂ.ಟಿ.ಬಿ ನಾಗರಾಜ್ ಕಡೆಯಿಂದ ಯೋಗೇಶ್ವರ್ ಅಂದು ಸಾಲ ತಂದರು ಇದು ಯಾಕೆ ಬೇಕಿತ್ತು. ಈಗ ಮಾತನಾಡುವವರು ಆಗ ಎಲ್ಲಿದ್ದರು ಅಂತಾ ರಮೇಶ್ ಅತೃಪ್ತ ಶಾಸಕರ ವಿರುದ್ಧ ಗರಂ ಆದರು.
ಒಟ್ಟಾರೆ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆ ನಂತರ ಮತ್ತೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಮತ್ತೆ ರಮೇಶ ಜಾರಕಿಹೊಳಿ ಇದೇ ವೇಳೆ ಪುನರುಚ್ಚರಿಸಿದರು.