Uncategorized

ನಕಲಿ ಬೆಳ್ಳಿ ನಾಣ್ಯ ವಿತರಿಸಿ ವಂಚನೆ: ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ವಿರುದ್ಧ ಮತದಾರರ ಆಕ್ರೋಶ

Share

ಖಾನಾಪುರ ತಾಲೂಕಿನ ಪ್ರಭುನಗರದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭ ಅಭ್ಯರ್ಥಿಗಳು ಮತದಾರರಿಗೆ ನಕಲಿ ಬೆಳ್ಳಿ ನಾಣ್ಯ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ಪ್ರಭುನಗರದ ಸಂಗೀತಾ ನಾಯ್ಕ ಸೇರಿದಂತೆ ಮತದಾರರು ಅಭ್ಯರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಚುನಾವಣೆ ವೇಳೆ ಹಲವೆಡೆ ಮತದಾರರಿಗೆ ಭರ್ಜರಿ ಆಮಿಷ ಒಡ್ಡಿದ ಆರೋಪಗಳು ಕೇಳಿ ಬಂದಿವೆ. ಪ್ರಭುನಗರದಲ್ಲಿ ಅಭ್ಯರ್ಥಿಗಳು ನೀಡಿದ ಬೆಳ್ಳಿ ನಾಣ್ಯ ಪಡೆದ ಮತದಾರರು ಬೆಸ್ತು ಬಿದ್ದಿದ್ದಾರೆ. ಪ್ರಭುನಗರದಲ್ಲಿ ೫೦೦ರಷ್ಟು ಬೆಳ್ಳಿ ನಾಣ್ಯಗಳನ್ನು ಅಭ್ಯರ್ಥಿಗಳು ಹಂಚಿದ್ದರು. ಆದರೆ ಬಂಗಾರದ ಆಭರಣ ತಯಾರಿಸುವವರ ಬಳಿ ತೋರಿಸಿದಾಗ ಈ ಬೆಳ್ಳಿ ನಾಣ್ಯಗಳು ನಕಲಿ ಎಂಬುದು ಬಹಿರಂಗವಾಗಿದೆ ಎಂದು ಮತದಾರರು ಹೇಳುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪ್ರಭುನಗರದ ಮತದಾರರಾದ ಸಂಗೀತಾ ನಾಯ್ಕ, ಮತದಾರರಿಗೆ ಅಭ್ಯರ್ಥಿಗಳು ನಕಲಿ ಬೆಳ್ಳಿ ನಾಣ್ಯ ವಿತರಿಸಿದ್ದಾರೆ. ಇದು ಮತದಾರರಿಗೆ ಮಾಡಿದ ಅವಮಾನವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಹರಿಹಾಯ್ದಿದ್ದಾರೆ.
ಒಟ್ಟಿನಲ್ಲಿ ನಕಲಿ ಬೆಳ್ಳಿ ನಾಣ್ಯ ನೀಡಿ ಮತದಾರರ ಓಟು ಗಿಟ್ಟಿಸಿದ ಅಭ್ಯರ್ಥಿಗಳ ನಡೆ ತೀವ್ರ ಚರ್ಚೆಗೂ ಗ್ರಾಸವಾಗಿದೆ.

Tags:

error: Content is protected !!