Crime

ನಂದಗಡದ ಲಕ್ಷ್ಮೀ(ಧನಶ್ರೀ) ಪ್ರಶಾಂತ ಪಾಟೀಲ ನಾಪತ್ತೆ

Share

ಖಾನಾಪುರ ತಾಲೂಕಿನ ಹಂದಿಗನೂರಿಗೆ ಗಂಡನೊಂದಿಗೆ ಮನೆ ವಾಸ್ತು ಶಾಂತಿ ಕಾರ್ಯಕ್ರಮಕ್ಕೆ ತೆರಳಿದ್ದ ತಮ್ಮ ಮಗಳು ಗೋವಾಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ 2020ರ ನವೆಂಬರ್ 24ರಿಂದ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಚಾಪಗಾಂವ ಗ್ರಾಮದ ವಿಠಲ ಯಲ್ಲಪ್ಪ ಯಳ್ಳಗೂರಕರ ನಂದಗಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

28 ವರ್ಷದ ಲಕ್ಷ್ಮೀ ಅಲಿಯಾಸ್ ಧನಶ್ರೀ ಪ್ರಶಾಂತ ಪಾಟೀಲ ಕಾಣೆಯಾದವಳು. 2020 ರ ನವೆಂಬರ್ 24 ರಂದು ಮುಂಜಾನೆ 11 ಗಂಟೆಗೆ ತನ್ನ ಗಂಡನೊಂದಿಗೆ ಹಂದಿಗನೂರಿಗೆ ಮನೆ ವಾಸ್ತಶಾಂತಿ ಕಾರ್ಯಕ್ರಮಕ್ಕೆ ಹೋಗಿದ್ದಳು. ಅಲ್ಲಿಂದ ಗೋವಾಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿ ತನ್ನ ಗಂಡನ ಬಳಿಯೂ ಹೋಗದೇ, ಹಂದಿಗನೂರಿಗೂ ಹೋಗದೇ, ಗೋವಾಕ್ಕೂ ಹೋಗದೇ ಕಾಣೆಯಾಗಿದ್ದಾಳೆ ಎಂದು ಖಾನಾಪುರ ತಾಲೂಕಿನ ಚಾಪಗಾಂವ ಗ್ರಾಮದ ಹುಡುಗಿಯ ತಂದೆ ವಿಠಲ ಯಲ್ಲಪ್ಪ ಯಳ್ಳಗೂರಕರ ನಂದಗಡ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
5ಅಡಿ 4 ಇಂಚು ಎತ್ತರ, ಸದೃಡ ಮೈಕಟ್ಟು, ಗೋಧಿಗೆಂಪು ಮೈಬಣ್ಣ, ದುಂಡು ಮುಖ ಇದೆ. ಮರಾಠಿ, ಹಿಂದಿ, ಕೊಂಕಣಿ ಭಾμÉ ಮಾತನಾಡುತ್ತಾಳೆ. ಎಸ್.ಎಸ್.ಎಲ್.ಸಿ. ಓದಿದ್ದಾಳೆ. ಗುಲಾಬಿ ಬಣ್ಣದ ಸೀರೆ, ಜಂಪರ ಧರಿಸಿರುತ್ತಾಳೆ.

ಮಾಹಿತಿ ಸಿಕ್ಕಲ್ಲಿ ಅಥವಾ ಪತ್ತೆ ಆದಲ್ಲಿ ಬೆಳಗಾವಿ ಕಂಟ್ರೋಲ್ ರೂಮ್‍ಗೆ ಅಥವಾ ನಂದಗಡ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ : 08336/236633. ಮೊಬೈಲ್ ಸಂಖ್ಯೆ:9480804087
ಸಿಪಿಐ ಖಾನಾಪೂರ ಕಾರ್ಯಾಲಯ: 083369 223233 ಕಂಟ್ರೋಲ್ ರೂಮ ಬೆಳಗಾವಿ ಸಂಖ್ಯೆ:0831/ 2405231 ಇಲ್ಲಿಗೆ ಮಾಹಿತಿ ನೀಡಬೇಕು ಎಂದು ಕೋರಲಾಗಿದೆ.

 

Tags:

error: Content is protected !!