ಹೌದು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಾತ್ರೆ ಪ್ರತಿವರ್ಷ ಅದ್ದೂರಿಯಾಗಿ ನಡೆಯಬೇಕಿದ್ದ ಜಾತ್ರೆ ಬಹುಸಂಖ್ಯೆಯಲ್ಲಿ ಭಕ್ತರು ಬರಲು ಅನುಮತಿ ಇಲ್ಲದ ಕಾರಣ ಬಂದ ಭಕ್ತರು ಅತ್ಯಂತ ಉತ್ಸಾಹದಲ್ಲಿ ಬೆಳ್ಳಗೆ ಪೂಣ್ಯ ಭೂಮಿಯಲ್ಲಿ ಪೂಜಾ, ಅಭಿಷೇಕ ಮುಗಿಸಿ ಕಲ್ಲಿನ ಟಗರು ದೇವರ ಮೂರ್ತಿಗಳನ್ನುನಂದಗಡ ಗ್ರಾಮದ ಐದು ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಮರಳಿ ಸಂಗೋಳ್ಳಿ ರಾಯಣ್ಣ ಪೂಣ್ಯ ಭೂಮಿಗೆ ಆಗಮಿಸಿತ್ತು.
ಹೆಣ್ಣುಮಕ್ಕಳ ಡೊಳ್ಳು ಕುಣಿತ ಮತ್ತು ವಿವಿಧ ವಾದ್ಯ ಮೇಳಗಳೊಂದಿಗೆ ಸಂಗೋಳ್ಳಿ ರಾಯಣ್ಣನಿಗೆ ವಿಶೇಷ ಗೌರವ ಸಲ್ಲಿಸಲಾಯಿತು.ಅರೆಮಾರಿ ಕುರುಬ ಜನಾಂಗದ ಮುಖಂಡರಾದ ಶ್ರೀ ಲಕ್ಷ್ಮಣ್ ಭಾಮನೆ,ಕ್ರಿಷ್ಣಾ ಭಾಮನೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ ಸೋನೋಳ್ಳಿ ಜಾತ್ರೆಯ ನೇತೃತ್ವವಹಿಸಿದ್ದರು.
ಜೋತೆಗೆ ರಾಷ್ಟ್ರೀಯ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಸಂಗೋಳ್ಳಿ ರಾಯಣ್ಣ ಅಭಿಮಾನಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.