ಬೆಳಗಾವಿಯ ಸಂಜೀವಿನಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದ ಕ್ರಿಶ್ಚಿಯನ್ ಧರ್ಮಪ್ರಚಾರಕಿ ಫ್ರಾನ್ಸಿನಾ ಜಾರ್ಜ್ ಡೆಲ್ಲಾಸಿಂಗ್ ಅನಾರೋಗ್ಯ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಹೆಲ್ಫ್ ಫಾರ್ ನೀಡೀ ಸಂಘಟನೆಯ ನೆರವಿನಿಂದ ಅವರ ಅಂತ್ಯಸಂಸ್ಕಾರವನ್ನು ಕ್ರಿಶ್ಚಿಯನ್ ಧರ್ಮದ ವಿಧಿ ವಿಧಾನಗಳಂತೆ ನೆರವೇರಿಸಲಾಯಿತು.
ವಾರಸುದಾರರಿಲ್ಲದೇ ಕಳೆದ 10-12 ವರ್ಷಗಳಿಂದ ಚವ್ಹಾಟ ಗಲ್ಲಿಯ ರಾಹುಲ್ ಕಿಲ್ಲೇಕರ ಅವರ ಆರೈಕೆಯಲ್ಲಿದ್ದ ಫ್ರಾನ್ಸಿನಾ ಜಾರ್ಜ್ ಡೆಲ್ಲಾಸಿಂಗ್, ವಯೋಸಹಜ ಕಾಯಿಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ರಿಶ್ಚಿಯನ್ ಧರ್ಮಪ್ರಚಾರಕಿ ಫ್ರಾನ್ಸಿನಾ ಜಾರ್ಜ್ ಡೆಲ್ಲಾಸಿಂಗ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಹುಲ್ ಕಿಲ್ಲೇಕರ ಹೆಲ್ಪ್ ಫಾರ್ ನೀಡೀ ಸಂಘಟನೆಯ ಸುರೇಂದ್ರ ಅನಗೋಳಕರ್ ಅವರಿಗೆ ಕರೆ ಮಾಡಿದರು. ಕೊನೆಗೆ ಹೆಲ್ಫ ಫಾರ್ ನೀಡೀ ಸಂಘಟನೆಯ ಸದಸ್ಯರು, ಸುನೀಲ ಧನವಾಡೆ, ಸೈಮನ್ ಮಾಂಥೆರೋ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳ ನೆರವು ಪಡೆದು ಕ್ರಿಶ್ಚಿಯನ್ ಧರ್ಮದ ವಿಧಿ ವಿಧಾನಗಳಂತೆ ಧರ್ಮಪ್ರಚಾರಕಿ ಫ್ರಾನ್ಸಿನಾ ಜಾರ್ಜ್ ಡೆಲ್ಲಾಸಿಂಗ್ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು.
ಒಟ್ಟಿನಲ್ಲಿ ಹೆಲ್ಪ್ ಫಾರ್ ನೀಡೀ ಸಂಘಟನೆಯು ವಾರಸುದಾರರಿಲ್ಲದ ಕ್ರಿಶ್ಚಿಯನ್ ಧರ್ಮ ಪ್ರಚಾರಕಿಯೊಬ್ಬರ ಅಂತಿಮ ಸಂಸ್ಕಾರವನ್ನು ಅವರ ಧರ್ಮದಂತೆ ನೆರವೇರಿಸಿ ಸಾಮಾಜಿಕ ಜವಾಬ್ದಾರಿ ಪೂರೈಸಿದೆ.