ಕಳೇದ ಒಂದುವರೆ ತಿಂಗಳಿನಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ರೈತರು, ಅದರಲ್ಲಿ ವೃದ್ಧ ರೈತರು ತಮ್ಮ ಹಕ್ಕುಗಾಗಿ ಜೀವ ತೆಗೆದುಕೊಳ್ಳುವ ಚಳಿಯಲ್ಲಿ ಹೊಸ ದೆಹಲಿಯಲ್ಲಿ ಪ್ರತಿಭಟಣೆ ಕೈಗೊಂಡಿದ್ದಾರೆ.
ಅದರಲ್ಲಿ 55 ವೃದ್ಧ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಯಾವುದೇ ದಯೆ ಭಾವನೆ ಇಲ್ಲದೆಯಿರುವ ಕೇಂದ್ರ ಸರಕಾರ ತಮ್ಮ ಹಟ ಸಾಧಿಸಲು ಪ್ರಯತ್ನಿಸುತ್ತಿದೆ.
ಇಂಥಹ ಸರಕಾರಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ರೈತರ ಬೇಡಿಕೆಗಳನ್ನು ಎತ್ತಿ ಹಿಡಿದು, ಕೂಡಲೆ ರೈತರ ಸಮಸ್ಯೆಗಳು ಇತ್ಯರ್ಥಗೊಳಿಸಿರಿಯೆಂದು ನೀಡಿರುವ ಸೂಚನೆ ರೈತರ ಪಾಲಿಗೆ ಒಂದು ರೀತಿ ಜಯ ಬಂದಂತಾಗಿದೆಯೆಂದು ಸ್ವಾಭಿಮಾನಿ ರಯತ್ ಸಂಘಟಣೆಯ ಸಂಸ್ಥಾಪಕರು, ಹಾಗೂ ಮಾಜಿ ಸಂಸದ ಸದಸ್ಯ ರಾಜು ಶೆಟ್ಟಿ ಕಾಗವಾಡದಲ್ಲಿ ಪತ್ರಿಕೆದೊಂದಿಗೆ ಮಾತನಾಡುವಾಗ ಹೇಳಿದರು.
ಸೋಮವಾರ ರಂದು ಸ್ವಾಭಿಮಾನಿ ರಯತ್ ಸಂಘಟಣೆ ಇವರು ಶಾಖೆ ಉದ್ಘಾಟನೆ ರಾಜು ಶೆಟ್ಟಿ ನೆರವೇರಿಸಿ ಮಾತನಾಡಿದರು.
ದೆಹಲಿಯಲ್ಲಿ ಪ್ರತಿಭಟಣೆಯಲ್ಲಿ ಪಾಲ್ಗೊಂಡ ಅನೇಕ ರೈತರು ವೃದ್ಧರಾಗಿದ್ದಾರೆ. ಆದರೂ ತಮ್ಮ ಬೇಡಿಕೆಗಳು ಸರಕಾರ ಮುಂದೆ ಮಂಡಿಸಿ ನ್ಯಾಯ ಪಡೆದುಕೊಳ್ಳಲು ಚಳಿ, ಗಾಳಿ, ಮಳಿಗೆ ಲೆಕ್ಕಿಸದೆ ಹೋರಾಡುತ್ತಿದ್ದಾರೆ.ಅವರಿಗೆ ನ್ಯಾಯ ದೊರೆಯುವುದು ಶತಸಿದ್ಧ. ಕೇಂದ್ರ ಸರಕಾರ ಕೆಲ ನಿಯಮಗಳು ರೈತ ವಿರೋಧಿವಾಗಿವೆ. ಅವುಗಳನ್ನು ತೆಗೆದುಹಾಕಲು ತಮ್ಮ ಬೇಡಿಕೆಗಳು ಮಂಡಿಸಿದ್ದಾರೆ. ಈ ಬೇಡಿಕೆಗಳು ನ್ಯಾಯಾಲಯ ಎತ್ತಿ ಹಿಡಿದಿದೆ ಎಂದರು.
ಕೃಷ್ಣಾ ನದಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಹರಿದು ಬರುತ್ತದೆ. ಎರಡು ರಾಜ್ಯದ ನೆಲ, ಜಲ ಒಂದಾಗಿದೆ. ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆದ ರೈತರಿಗೆ 3 ಸಾವಿರ ರೂ. ಪ್ರತಿಟನ್ ಕಬ್ಬಿಗೆ ದರ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಶಿರಗುಪ್ಪಿ ಶುಗರ್ ವಕ್ರ್ಸ್ ಹಾಗೂ ಶಿವಶಕ್ತಿ ಶುಗರ್ ವಕ್ರ್ಸ್ ಈ ಎರಡೇ ಸಕ್ಕರೆ ಕಾರ್ಖಾನೆಗಳು ಪ್ರತಿಟನ್ ಕಬ್ಬಿಗೆ 2,700 ರೂ. ದರ ನೀಡುತ್ತಿದ್ದಾರೆ. ಉಳಿದ ಸಕ್ಕರೆ ಕಾರ್ಖಾನೆಗಳು 2,500 ರೂ. ದರ ನೀಡುತ್ತಿದ್ದಾರೆ. ಇದು ರೈತರ ಮೇಲೆ ಅನ್ಯಾಯವಾಗುತ್ತಿದೆ. ಶೀಘ್ರದಲ್ಲಿ ಇದನ್ನು ಸರಿಪಡಿಸಿರಿ ಎಂದು ಎಚ್ಚರಿಕೆ ನೀಡಿದರು.
ಸಮಾರಂಭದ ಸಾನ್ನಿಧ್ಯ ಯತೀಶ್ವರಾನಂದ ಸ್ವಾಮೀಜಿ ವಹಿಸಿ ಆಶೀರ್ವದಿಸಿದರು. ಸಮಾರಂಭದಲ್ಲಿ ರೈತ ಮುಖಂಡರಾದ ಸುಭಾಷ ಮಗದುಮ್ಮ, ಸುಭಾಷ ಕಠಾರೆ, ಬಿ.ಎ.ಪಾಟೀಲ, ಅಜೀತ ಕರವ್, ಬಸಗೌಡಾ ಪಾಟೀಲ, ಸಾಗರ ಶಂಭುಶೆಟ್ಟಿ, ತಾತ್ಯಂಭಟ್ಟ ಜೋಶಿ ಇವರು ರಾಜು ಶೆಟ್ಟಿ ಇವರ ಕಾರ್ಯ ಶ್ಲಾಘೀಸಿದರು. ಶಾಂತಿನಾಥ ಕಿನಿಂಗೆ, ಸುಕುಮಾರ ಕಿನಿಂಗೆ, ಮಹೇಶ ಕಿನಿಂಗೆ ಇವರನ್ನು ರಾಜು ಶೆಟ್ಟಿ ಸನ್ಮಾನಿಸಿದರು.
ಈ ವೇಳೆ ನ್ಯಾಯವಾದಿಗಳಾದ ಕಾಕಾ ಪಾಟೀಲ, ರಮೇಶ ಚೌಗುಲೆ, ಬಸಗೌಡಾ ಪಾಟೀಲ, ಶಶೀಕಾಂತ ಜೋಶಿ, ಸುರೇಶ ಚೌಗುಲೆ, ಸಚಿನ ಕವಟಗೆ, ಪ್ರಕಾಶ ಚೌಗುಲೆ, ಭಮ್ಮನ್ನಾ ಚೌಗುಲೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.