ಬೆಳಗಾವಿ ತಾಲೂಕಿನ ಹಲಗಾ ಗ್ರಾಮದೇವತೆ ಶ್ರೀ ಮಹಾಲಕ್ಷಿ ದೇವಸ್ಥಾನದಲ್ಲಿ ಬೆಳ್ಳಂಬೆಳಗ್ಗೆ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಕಲಿಯುಗದಲ್ಲಿ ದೇವರು-ಭಯ ಎಂಬ ಮಾತುಗಳು ದೂರವಾಗಿದ್ದು, ದೇವರಿಗೂ ಅಂಜದ ಜನ ದೇವಸ್ಥಾನಕ್ಕೆ ಕನ್ನ ಹಾಕುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂದು ಬುಧವಾರ ಬೆಳ್ಳಂಬೆಳಗ್ಗೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದೇವತೆ ಶ್ರೀ ಮಹಾಲಕ್ಷಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ದೇವಿಯ ಮೂರ್ತಿಯ ಮೇಲೆ ತೊಡಸಿದ್ದ ಚಿನ್ನದ ಮಾಂಗಲ್ಯ, ಚಿನ್ನದ ಸರ ಮತ್ತು ಮೂಗುತಿಯನ್ನ ಎಗರಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ದೇವಿ ದರ್ಶನಕ್ಕೆ ಎಂದಿನAತೆ ಬಂದ ಪೂಜಾರಿಗಳು ದೇವಸ್ಥಾನದ ಬಾಗಿಲು ತೆರೆದಿರುವುದನ್ನ ನೋಡಿ ಹೈರಾಣಾಗಿದ್ದಾರೆ. ವಿಷಯವನ್ನ ಪೊಲೀಸರಿಗೆ ಮುಟ್ಟಿಸಿದ್ದು, ಹಿರೇಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಮುಂದುವರೆಸಿದ್ದಾರೆ.