Vijaypura

ಮಾಜಿ ದೇವದಾಸಿ ಮಕ್ಕಳೊಂದಿಗೆ ಹೊಸ ವರ್ಷಾಚರಣೆ ಆಚರಿಸಿದ ಜಿ.ಪಂ.ಅಧ್ಯಕ್ಷೆ ಸುಜಾತಾ ಕಳ್ಳಿಮನಿ

Share

ಹೊಸ ವರ್ಷಾಚರಣೆಯನ್ನು ಮಾಜಿ ದೇವದಾಸಿ ಮತ್ತು ಅವರ ಮಕ್ಕಳ ಜೊತೆ ಕಾಕಂಡಕಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುಜಾತ ಕಳ್ಳಿಮನಿ ಅವರು ಆಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಖಂಡಕಿಯ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಂಗಡಿಯವರು ವಹಿಸಿದ್ದರು ಅಹಿಂದ ಮುಖಂಡರಾದ ಶ್ರೀ ಸೋಮನಾಥ ಕಳ್ಳಿಮನಿ ಜಿಲ್ಲಾ ಪಂಚಾಯತಿಯ ಯೋಜನಾಧಿಕಾರಿಗಳ ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ ನೂರಾರು ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳು ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಅವರ ನೋವುಗಳನ್ನ ಮುಕ್ತವಾಗಿ ಸಂವಾದದಲ್ಲಿ ಹಂಚಿಕೊಂಡರು ದೇವದಾಸಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸರ್ಕಾರದ ಯೋಜನೆಗಳನ್ನು ಸಮಾಜಕಲ್ಯಾಣ ಉಪನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಚೌಹಾಣ್ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಶ್ರೀಮತಿ ನಿರ್ಮಲ ಸುರಪುರ್ ಗ್ರಾಮೀಣ ವಲಯದ ಸಿಡಿಪಿಒ ಧುತ್ತರಗಿ ಮಟ್ ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾಕ್ಟರ್ ಈರಣ್ಣ ಧಾರವಾಡಕರ್ ಪಿಡಿಒ ಕಟ್ಟಿ ವಿವರಿಸಿದರು ಹಲವಾರು ದೇವದಾಸಿ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿವರಗಳನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ವಿವರಿಸಿದರು,

ಪ್ರಾಸ್ತಾವಿಕವಾಗಿ ಜಿಲ್ಲಾ ಜಿಲ್ಲಾ ಆಸ್ಪತ್ರೆ ಹಿರಿಯ ಆಪ್ತಸಮಾಲೋಚಕ ರವಿ ಕಿತ್ತೂರ ಮಾತನಾಡಿದರು ಕಾರ್ಯಕ್ರಮದ ಸಂಘಟನೆಯನ್ನು ಡಾಕ್ಟರ್ ಅಂಬೇಡ್ಕರ್ ರುರಲ್ ದೆವಲಪ್ಮೆಂಟ್ ಸೊಸೈಟಿ ದೇಗಿನಾಳ ಅಧ್ಯಕ್ಷರಾದ ಪ್ರಕಾಶ್ ಉಪಾಧ್ಯಕ್ಷರಾದ ಯಶೋದ ಮೇಲಿನಕೇರಿ ಕಾರ್ಯದರ್ಶಿ ರೇಣುಕಾ ವಹಿಸಿದ್ದರು ಹೊಸ ವರ್ಷಾಚರಣೆಯನ್ನು ದೇವದಾಸಿ ಮಹಿಳೆಯರ ಒಂದಿಗೆ ಜ್ಯೋತಿ ಬೆಳಗಿಸಿ ಅವರ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು…

Tags:

error: Content is protected !!