National

ದೆಹಲಿಯಲ್ಲಿ ರೈತರ ಧರಣಿ ವಿಚಾರ..ಇಂದು ಮತ್ತೆ ಮಾತುಕತೆ ವಿಫಲ..ಧರಣಿ ಮುಂದುವರಿಸಲು ನಿರ್ಧಾರ

Share

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ನಡೆಸಿ ಇಂದಿನ ಸಭೆಯೂ ವಿಫಲವಾಗಿದೆ.

ಹೌದು ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಜನವರಿ 8ರಂದು ಮತ್ತೊಮ್ಮೆ ಸಂಧಾನ ಸಭೆ ನಡೆಸುವ ಸಾಧ್ಯತೆ ಇದೆ. ಕೃಷಿ ಸಂಬಂಧಿತ ನೂತನ ಕಾಯ್ದೆಗಳನ್ನು ರದ್ಧುಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ 40 ದಿನಗಳ ನಂತರವೂ ಮುಂದುವರೆದಿದೆ.

ಪ್ರತಿಭಟನಾನಿರತ ರೈತರೊಂದಿಗೆ ಸರ್ಕಾರ ಈಗಾಗಲೇ 7 ಸಲ ಮಾತುಕತೆ ನಡೆಸಿದ್ದರೂ, ಯಾವುದೇ ರೀತಿ ಪ್ರಯೋಜನವಾಗಿಲ್ಲ. ಇಂದು ರೈತ ನಾಯಕರೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಗಿದ್ದು, ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪದ ಕಾರಣ ಸಭೆ ವಿಫಲವಾಗಿದೆ. ಒಟ್ಟಾರೆ ಬೇಡಿಕೆ ಈಡೇರುವವರೆಗೂ ಪಟ್ಟು ಬಿಡದೇ ಹೋರಾಟ ಮುಂದುವರಿಸಿರುವ ರೈತರು ಯಾವುದೇ ಕಾರಣಕ್ಕೂ ಜಗ್ಗುವಂತೆ ಕಾಣಿಸುತ್ತಿಲ್ಲ.

 

Tags:

error: Content is protected !!