ಬೆಳಗಾವಿ ತಾಲ್ಲೂಕಿನ ತೋಟಗಾರಿಕೆ ಇಲಾಖೆ (ಜಿ.ಪಂ) ವತಿಯಿಂದ 2020-21 ನೇ ಸಾಲಿನ ಹಣ್ಣು/ತರಕಾರಿ ಮಾರಾಟ ಮಾಡಲು ತಳ್ಳುವ ಗಾಡಿಗೆ ಸಹಾಯಧನ ನೀಡಲು ಕಾರ್ಯಕ್ರಮ ಅನುಮೊದನೆಯಾಗಿದ್ದು ಅದರಂತೆ ಒಟ್ಟು ತಳ್ಳುವ ಗಾಡಿ ನಿರ್ಮಾಣದ ವೆಚ್ಚ ರೂ. 30,000/- ಗಳಷ್ಟಿದ್ದು, ರೂ.15,000/-ಗಳ ಸಹಾಯಧನ ಪಡೆದುಕೊಳ್ಳುವುದಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಳಗಾವಿ ತಾಲ್ಲೂಕಿನ ಆಸಕ್ತ ಹಣ್ಣು ಮತ್ತು ತರಕಾರಿ ಮಾರಟಗಾರರು ಈ ಕೂಡಲೇ ತಮ್ಮ ಆಧಾರ ಕಾರ್ಡ ಹಾಗೂ ಭಾವಚಿತ್ರ ದಾಖಲೆಗಳ ಜೊತೆಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ (ಮೊಬೈಲ್ ಸಂಖ್ಯೆ: 9964295987) / ತಾಲ್ಲೂಕು ತೋಟಗಾರಿಕೆ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಬೆಳಗಾವಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.