ಶಿಕ್ಷಣ ತಜ್ಞರು ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ಶಿವಶಂಕರ ಹಿರೇಮಠ ಧಾರವಾಡ ಡಾ ಭಾರತಿ ಮಠದ ಅವರ””ಮನಸು ಮಲ್ಲಿಗೆ'” ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆ ಯ ವಿಶ್ರಾಂತ ಸಂಪಾದಕರಾದ ಶ್ರೀ ಮನೋಜ ಕುಮಾರ ಪಾಟೀಲ ಅವರು ಆಗಮಿಸಿದ್ದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಶ್ರೀ ಮತಿ ನೀಲಗಂಗಾ ಚರಂತಿಮಠ ವಹಿಸಿದ್ದರು .ಹಿರಿಯ ಸಾಹಿತಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ
ಅವರು ಕೃತಿ ಪರಿಚಯ ಮಾಡಿದರು. ಪ್ರಾಚಾರ್ಯರಾದ ಡಾ ಕುಮಾರ ಹಿರೇಮಠ ಸ್ವಾಗತಿಸಿದರು.
ಸುನಂದಾ ಎಮ್ಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶಾ ಯಮಕನಮರಡಿ ಪ್ರಾರ್ಥಿಸಿದರು. ಜಯಶ್ರೀ ಕೆಂಗೇರಿ ವಂದಿಸಿದರು. ಇಂದಿರಾ ಮೋಟೆಬೆನ್ನೂರ ನಿರೂಪಿಸಿದರು. ಶೈಲಜಾ ಭಿಂಗೆ, ಆಶಾ ಕಡಪಟ್ಟಿ ಚಂದ್ರಶೇಖರ ಸವದಿ, ಮಂಜುನಾಥ ಕುಂದರಗಿ ರಶ್ಮೀ ಮಠದ ಉಪಸ್ಥಿತರಿದ್ದರು. ಅಮೋಘ ಕಳ್ಳೀಮಠ ಹಾಗೂ ಶ್ರೀ ಗೌರಿ ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು.