ಚಿಕ್ಕೋಡಿಯಲ್ಲಿ ಟ್ರ್ಯಾಕ್ಟರ್ ಟೇಲರ್ನ ಜಾಯಿಂಟ್ ಕಟ್ ಆದ ಪರಿಣಾಮ ಟ್ರ್ಯಾಕ್ಟರ್ ಟೇಲರ್ ರಸ್ತೆಯ ಪಕ್ಕದ ವೈನ್ ಶಾಪ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹೌದು ಚಿಕ್ಕೋಡಿ ಪಟ್ಟಣದ ಅಂಕಲಿ ಕೂಟ್ ರಸ್ತೆಯಲ್ಲಿ ಗುರುವಾರ ರಾತ್ರಿ 9 ಗಂಟೆಯ ಸುಮಾರಿಗೆ ಕಬ್ಬಿನ ಟ್ರ್ಯಾಕ್ಟರ್ ಒಂದು ಸಂಚರಿಸುವ ಸಂದರ್ಭದಲ್ಲಿ ಟ್ರಾಕ್ಟರ್ ಚಾಲಕನೂ ಗೇರ್ ಬದಲಿಸುವ ಸಂದರ್ಭದಲ್ಲಿ ಏಕಾಏಕಿಯಾಗಿ ಟ್ಯಾಕ್ಟರ್ ಟೇಲರ್ ಜಾಯಿಂಟ್ ಕಟ್ಟಾಗಿ ಟೇಲರ್ ಸುಮಾರು 250 ಮೀಟರ್ ನಷ್ಟು ಹಿಂದಕ್ಕೆ ಸರಿದಿದೆ. ಪರಿಣಾಮವಾಗಿ ಈ ರಸ್ತೆಯಲ್ಲಿ ಭಾರಿ ಪ್ರಮಾಣದ ವಾಹನಗಳ ಸಂಚಾರದಿಂದ ತುಂಬಿ ತುಳುಕುತ್ತಿತ್ತು. ಆದರೆ ಅದೃಷ್ಟವಶಾತ ಟ್ರ್ಯಾಕ್ಟರ್ ಟೇಲರ್ ಜಾಯಿಂಟ್ ಕಟ್ ಆದ ಸಂದರ್ಭದಲ್ಲಿ ಹಿಂದಕ್ಕೆ ಇದ್ದ ಓರ್ವ ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಅದನ್ನು ಹೊರತುಪಡಿಸಿದರೆ ಮತ್ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಇದೇ ರಸ್ತೆ ಪಕ್ಕದಲ್ಲಿದ್ದ ವೈನ ಶಾಪ್ಗೆ ಟೇಲರ ಡಿಕ್ಕಿ ಹೊಡೆದು ಮುಂದೆ ಆಗಬಹುದಾದ ಅನಾಹುತ ತಪ್ಪಿ ಹೋಗಿದೆ. ಇದರಿಂದ ಯಾವುದೇ ಸಾವು-ನೋವುಗಳು ಆಗಿಲ್ಲ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯು ನಡೆಯುತ್ತಿದ್ದಂತೆ ಅಂಕಲಿ ಕೂಟ್ ರಸ್ತೆಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಇನ್ನೂ ಈ ಘಟನೆ ನಡೆದು ಅರ್ಧ ಗಂಟೆಯಾದರೂ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದಿರಲಿಲ್ಲ. ಇದರಿಂದ ವಾಹನ ಸವಾರರು ಪೆÇಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯು ನಡೆಯಿತು.