Chikkodi

ಟ್ರಾಕ್ಟರ್ ಟ್ರ್ಯಾಲಿ ಕೆಳಗೆ ಸಿಲುಕಿ ವೃದ್ಧ ಸಾವು

Share

ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ ಕೆಳಗೆ ಸಿಲುಕಿ ವೃದ್ಧರೊಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಿಪ್ಪಾಣಿ ತಾಲೂಕಿನ ಕೂಗನೋಳಿ ಗ್ರಾಮದಲ್ಲಿ ಸಂಭವಿಸಿದೆ.

76 ವಯಸ್ಸಿನ ಪ್ರಕಾಶ ಪೀರ ಗೌಡ ಪಾಟೀಲ ಮೃತ ದುರ್ದೈವಿ. ಬ್ಯಾಂಕಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೂರ್ಛೆ ಹೋಗಿ ಬೈಕ್ ಮೇಲಿಂದ ಬಿದ್ದು ಟ್ಯಾಕ್ಟರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕೂಗನೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!