ಮೊದಲೇ ಕೋರೊನಾ ಮಹಾಮಾರಿಯಿಂದ ಎಲ್ಲೆಡೆ ಭಯದ ವಾತಾವರಣ ಮನೆ ಮಾಡಿದೆ. ಇಂತಹದ್ದರಲ್ಲಿ ಆಸ್ಪತ್ರೆಯ ತ್ಯಾಜ್ಯವನ್ನ ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಜನರು ಮತ್ತಷ್ಟು ಭಯದಲ್ಲಿದ್ದಾರೆ. ಇದರ ವಿರುದ್ಧ ಕಾರ್ಯಾಚರಣೆ ನಡೆಸದ ಆರೋಗ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ರಾಜನಾಲೆಯ ಮೇಲೆ ರಾಜನಾಲೆಯ ಕೆಳಗೆ ಬಿಸಾಕಿರುವ ಆಸ್ಪತ್ರೆಯ ತಾಜ್ಯ… ಸಲೈನ್ ಪೈಪ್..ಸಿರಿಂಜ್‍ಗಳು… ನೋಡಿದರೇ ಮೈ ನವಿರೇಳುತ್ತದೆ. ಹೌದು, ಈ ದೃಶ್ಯಗಳು ಕಂಡು ಬಂದದ್ದು ಬೆಳಗಾವಿ ಶಾಸ್ತ್ರಿನಗರ ಹತ್ತಿರದ ರಾಜನಾಲೆಯಲ್ಲಿ.
ಶಾಸ್ತ್ರೀ ನಗರದ ಹತ್ತಿರ ಅಪೂರ್ವ ಹಾಸ್ಪಿಟಲ್ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ತ್ಯಾಜ್ಯವನ್ನ ಸರಿಯಾಗಿ ವಿಲೇವಾರಿ ಮಾಡದೇ ಆಸ್ಪತ್ರೆಯ ಹಿಂದುಗಡೆ ಇರುವ ರಾಜನಾಲೆಯಲ್ಲಿ ಎಸೆದು ಕೈತೊಳೆದುಕೊಳ್ಳುತ್ತಿದ್ದಾರೆ. ಇದರಿಂದ ಜನರಲ್ಲಿ ಮಹಾಮಾರಿಯ ಭಯ ಆವರಿಸಿದೆ.
ವೈಶ್ಚಿಕ ಕೋರೊನಾ ವೈರಸ್ ಬಂದಾಗಿನಿಂದ ಆಸ್ಪತ್ರೆಯ ತ್ಯಾಜ್ಯವನ್ನ ಅತ್ಯಂತ ಜಾಗರೂಕತೆಯಿಂದ ವಿಲೇವಾರಿ ಮಾಡುವಂತೆ ಮಾರ್ಗಸೂಚನೆ ನೀಡಲಾಗಿದೆ. ಆದರೇ ಇಲ್ಲಿನ ಆಸ್ಪತ್ರೆಯೂ ಈ ಆದೇಶವನ್ನ ತನ್ನ ಕಾಲಿನ ಕಸವಾಗಿಸಿಕೊಂಡಿದೆ. ಸಂಬಂಧಿಸಿದ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಕೂಡ ಇತ್ತ ಗಮನ ಹರಿಸುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೊದಲೆ ಮಹಾಮಾರಿಯ ಭಯ ಅಂತಹದ್ದರಲ್ಲಿ ಆಸ್ಪತ್ರೆಯ ಬೇಜವಾಬ್ದಾರಿ. ಇದರಿಂದ ಜನರು ಆತಂಕಕ್ಕಿಡಾಗಿದ್ದಾರೆ.