hubbali

ಚೆನ್ನಮ್ಮ ಮೂರ್ತಿ ಮೇಲಕ್ಕೆತ್ತರಿಸಿವಂತೆ ಕಾಂಗ್ರೆಸ್ ಕಾರ್ಯಕರ್ತರ ಮನವಿ

Share

ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಪ್ಲೈ ಓವರ್ ನಿರ್ಮಾಣದಿಂದ ರಾಣಿ ಚೆನ್ನಮ್ಮ ಪುತ್ಥಳಿಗೆ ಅವಮಾನವಾಗಲಿದೆ ಎಂದು ಚೆನ್ನಮ್ಮ ಮೂರ್ತಿಯನ್ನು ಪ್ಲೈ ಓವರ್ ನಿಂದ ಮೇಲಕ್ಕೆ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್‍ಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಡೆಯುತ್ತಿರುವ ಪ್ಲೈ ಓವರ್‍ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಲಿದ್ದಾರೆ. ಆದ್ರೆ ಕಾಮಗಾರಿ ಆರಂಭಕ್ಕೂ ಮುನ್ನ ಚೆನ್ನಮ್ಮ ಪುತ್ಥಳಿಗೆ ಆಗುತ್ತಿರುವ ಅವಮಾನವನ್ನು ಪರಿಗಣಿಸಿ ಪುತ್ಥಳಿ ಯನ್ನು ಮೇಲಕ್ಕೇರಿಸಲು ಸಚಿವರಿಗೆ ಮನವಿ ನೀಡಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿ ಅಂತಾ ಬಂದ್ರೆ ಎಲ್ಲರ ದೃಷ್ಟಿ ನೆಡುವುದು ಅದು ರಾಣಿ ಚನ್ನಮ್ಮಾಜಿ ಪುತ್ಥಳಿಯತ್ತ. ಹೀಗಾಗಿ ಪ್ಲೈ ಓವರ್ ನಿರ್ಮಾಣ ಮಾಡುತ್ತಿರುವ ಹಿನ್ನೆಲೆ ಚನ್ನಮ್ಮಾಜಿ ಪುತ್ಥಳಿಯನ್ನು ಎತ್ತರಿಸಿ, ಸೂಕ್ತ ಗೌರವ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

 

Tags:

error: Content is protected !!